ಮಂಗಳೂರು: ಕುಂದಾಪುರ-ಮಂಗಳೂರು ನಡುವೆ ಪ್ರಯಾಣಿಸುವ ಎರಡು ಬಸ್ಸುಗಳ ನಡುವೆ ಟೈಮಿಂಗ್ ವಿಚಾರವಾಗಿ ಬಸ್ಸುಗಳ ನಿವಾರ್ಹಕರ ನಡುವೆ ಹೊಡೆದಾಟ ನಡೆದಿದೆ. ಚಪ್ಪಲಿ ಎತ್ತಿ ಲೇಡಿ ಕಂಡಕ್ಟರ್ ಮತ್ತೊಂದು ಬಸ್ಸಿನ ನಿರ್ವಾಹಕನೊಂದಿಗೆ ಜಗಳವಾಡಿದ್ದಾರೆ. ಭಾರತಿ ಬಸ್ಸಿನ ಲೇಡಿ ಕಂಡಕ್ಟರ್ ರೇಖಾ ಮತ್ತು ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ನಡುವೆ ಗಲಾಟೆಯಾಗಿದೆ. ಸಂತೆಕಟ್ಟೆಯಲ್ಲಿ ಬಸ್ಸು ನಿಲ್ಲಿಸಿದಾಗ ದುರ್ಗಾಪ್ರಸಾದ್ ಬಸ್ಸಿನೊಳಗೆ ಬಂದ ರೇಖಾ ಪರಸ್ಪರ ಇಬ್ಬರು ಜಗಳವಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಯಾಣಿಕರ ಎದುರೇ ಕೈಕೈ ಮಿಲಾಯಿಸಿದ್ದಾರೆ. ಘಟನೆಯ ದೃಶ್ಯ ಸೀಸಿಟಿವಿಯಲ್ಲಿ ಸೆರೆಯಾಗಿದೆ.