ಕಿನ್ನಿಗೋಳಿ :ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಳುತ್ತಿರುವ ಶಿಮಂತೂರು ಗ್ರಾಮದ ಕುಬೆವೂರು ನಿವಾಸಿ ಬೇಬಿ .ಕೆ ಸುವರ್ಣ ಅವರ ಮನೆಗೆ ಉದ್ಯಮಿ ಹಾಗೂ ರಾಜಕೀಯ ನೇತಾರ ಡಾ.ರಾಜಶೇಖರ ಕೋಟ್ಯಾನ್ ಅವರು ಭೇಟಿ ನೀಡಿ ಧನ ಸಹಾಯವನ್ನು ನೀಡಿ ಆರೋಗ್ಯವಿಚಾರಿಸಿದರು.ನಂತರ ಕುಟುಂಬಕ್ಕೆ ಇನ್ನಷ್ಟು ಧನ ಸಹಾಯ ನೀಡುವ ಭರವಸೆ ನೀಡಿದರು.ಈ ಸಂದರ್ಭ ಕಾಂಗ್ರೇಸ್ ನ ಹಿಂದುಳಿದ ವರ್ಗ ಗಳ ರಾಜ್ಯ ಪ್ರಧಾನ ಕಾರ್ಯದರ್ಶಿ(ಒಬಿಸಿ) ಗುರುರಾಜ್ ಎಸ್ ಪೂಜಾರಿ,ಕಿಲ್ಪಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಗೋಪಿನಾಥ್ ಪಡಂಗ,ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಧನಂಜಯ ಮಟ್ಟು ಹಾಗೂ ಮತ್ತಿತರರು ಹಾಜರಿದ್ದರು.