Thursday, September 12, 2024
Homeಬೈಂದೂರುಬೈಂದೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಚೆಸ್ ಪಂದ್ಯಾಟ ಚಾಲನೆ

ಬೈಂದೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಚೆಸ್ ಪಂದ್ಯಾಟ ಚಾಲನೆ

ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೈಂದೂರು ಹಾಗೂ ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಇವರ ಜಂಟಿ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಚೆಸ್ ಪಂದ್ಯಾಟ ಶ್ರೀ ನರಸಿಂಹ ದೇವಾಡಿಗ ಮತ್ತು ಶೇಖರ್ ಖಾರ್ವಿ ಚೆಸ್ ಆಟ ಆಡುದರ ಮೂಲಕ ಚಾಲನೆ ನೀಡಲಾಯಿತು.

ಶೇಖರ್ ಖಾರ್ವಿ ಮತ್ತು ನರಸಿಂಹ ದೇವಾಡಿಗ ಇವರು ದೀಪ ಬೆಳಗಿಸಿ ಕಾರ್ಯಕ್ರಮಕೆ ಚಾಲನೆ ನೀಡಿ ಮಾತನಾಡಿ, ಕೇವಲ ದೈಹಿಕವಾದುದಲ್ಲ, ಮನೋಬಲ ಉಳ್ಳವರಲ್ಲಿ ಪ್ರಾಯೋಗಿಕ ಆಟವಾದ ಚದುರಂಗ ತಾಳ್ಮೆಯನ್ನು ಬಯಸುತ್ತದೆ. ಬದುಕಿಗೂ ತಾಳ್ಮೆ ಮುಖ್ಯ. ಹೀಗಾಗಿ ಈ ಆಟ ಶೈಕ್ಷಣಿಕ ಬದುಕಿಗೂ ಅತೀ ಅಗತ್ಯ ಎಂದು ಹೇಳಿದರು.


ಶ್ರೀ ಗಣೇಶ ಮೋಗವೀರ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪ್ರಾಂಶುಪಾಲರು ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತಾಡಿ
ಚೆಸ್ ಎಂಬುದು ಮಕ್ಕಳನ್ನು ಮಾನಸಿಕವಾಗಿ ಶಿಸ್ತು ಬದ್ಧವಾಗಿ ಮಾಡುವ ಕ್ರೀಡೆ, ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಗಳನ್ನು ತೋರಿಸಿ ಮುಂದೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶೇಖರ ಖಾರ್ವಿ ಅಧ್ಯಕ್ಷರು, ಗ್ರಾಮ ಪಂಚಾಯತ, ಕಿರಿಮಂಜೇಶ್ವರ, ಪ್ರಭಾಕರ ಎಸ್ ಸಹಾಯಕ ನಿರ್ದೇಶಕರು ಯುವಜನ ಸೇವಾ ಕ್ರೀಡಾ ಇಲಾಖೆ, ಬೈಂದೂರು ವಲಯ, ನರಸಿಂಹ ದೇವಾಡಿಗ ಅಧ್ಯಕ್ಷರು, ಗ್ರಾಮ ಪಂಚಯಾತ್ ನಾವುಂದ, ಗುರುರಾಜ್ : ಕಾರ್ಯದರ್ಶಿಗಳು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೈಂದೂರು, ಬಾಬು ಪೂಜಾರಿ : ಉಪಾಧ್ಯಕ್ಷರು, ಚೆಸ್ ಅಸೋಸಿಯೇಷನ್ ​​ಸಿದ್ದಿ ವಿನಾಯಕ ಚೆಸ್ ಅಕಾಡೆಮಿ ಸಂಚಾಲಕರು, ಅರುಣ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿಗಳು ಬೈಂದೂರು ವಲಯ, ಉಮಾನಾಥ ಕಾಪು ಅಧ್ಯಕ್ಷರು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಉಪಸ್ಥಿತರಿದ್ದರು .

ಉಪನ್ಯಾಸರಾದ ರಾಷ್ಟ್ರಮಟ್ಟದ ನಿರುಪಕರಾದ ಉದಯ ಸರ್ ಕಾರ್ಯಕ್ರಮ ನಿರೂಪಿಸಿದರು.
ದೀಪಿಕಾ ಆಚಾರ್ಯ ಮುಖ್ಯ ಶಿಕ್ಷಕಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಸ್ವಾಗತಿಸಿದರು. ಶಶಿಕಲಾ ವಂದಿಸಿದರು.

RELATED ARTICLES
- Advertisment -
Google search engine

Most Popular