ಬೈಂದೂರು: ಕಾರಣೀಕ ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಳದ ವಾರ್ಷಿಕ ಮನ್ಮಹಾರಥೋತ್ಸವ ಗುರುವಾರ ಜರುಗಿತು.
ಬೆಳಗ್ಗಿನಿಂದಲೇ ಪ್ರಧಾನ ತಂತ್ರಿ ಕೃಷ್ಣ ಸೋಮಯಾಜಿ ಕೋಟ, ಪ್ರಧಾನ ಅರ್ಚಕರಾದ ರಾಮಚಂದ್ರ ಕಾರಂತ್ ಅವರ ನೇತೃತ್ವದಲ್ಲಿ ನಿತ್ಯಬಲಿ, ಅಧಿವಾಸ ಹೋಮ, ರಥ ಶುದ್ಧಿ, ರಥ ಬಲಿ ಸೇರಿದಂತೆ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬೆಳಗ್ಗೆ 10 ಗಂಟೆಯ ಸುಮಾರಿಗೆ ರಥಾರೋಹಣ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು.
ಸಂಜೆ 5.30ಕ್ಕೆ ಶ್ರೀ ಮನ್ಮಹಾರಥೋತ್ಸವವು ವಿಶೇಷ ದೀಪಾಲಂಕಾರ, ಚಂಡೆವಾದನ, ಕೀಲು ಕುದುರೆ, ನಾಸಿಕ್ ಬೇಂಡ್, ವಾದ್ಯ ಮತ್ತು ಸ್ಯಾಕ್ಸೋಫೋನ್, ವಿಶೇಷ ಪುಷ್ಪಾಲಂಕಾರ, ವಿವಿಧ ಭಜನಾ ತಂಡಗಳಿಂದ ದಾಸ ಸಂಕೀರ್ತನೆ ಸಹಿತ ಕುಣಿತ ಭಜನೆ, ಛತ್ರ ಚಾಮರ, ಧ್ವಜ ಇನ್ನಿತರೆ ಸಕಳ ಷೋಢಶೋಪ ಚಾರದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಕೊನೆಯ ರಥೋತ್ಸವ: ರಾಜ್ಯದಲ್ಲಿಯೇ ಕುಂದಾಪುರದ ಕೋಟೇಶ್ವರ ದೇವಳದ ಮನ್ಮಾಹ ರಥೋತ್ಸವವು ಪ್ರಥಮ ರಥೋತ್ಸವವಾಗಿದ್ದರೆ, ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಳದ ಮನ್ಮಾಹರಥೋತ್ಸವವು ಕೊನೆಯ ರಥೋತ್ಸವ ಎಂಬ ಪ್ರತೀತಿಯಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಎನ್.ವಿ.ಪ್ರಕಾಶ್ ಐತಾಳ್, ಸಮಿತಿ ಸದಸ್ಯರಾದ ರಾಮಕೃಷ್ಣ ಭಟ್, ಗೋಪಾಲ ಶೆಟ್ಟಿ ಹಳಗೇರಿ, ವಿಜಯ ಪೂಜಾರಿ ಕೊಡೇರಿ, ಲಕ್ಷ್ಮೀ ಮೊಗವೀರ ಹೊಸಹಿತ್ತು, ಸರಸ್ವತಿ ನಾಯರಿ ಕಿರಿಮಂಜೇಶ್ವರ, ಕೆ.ಮಂಜುನಾಥ ಅರೆಹೊಳೆ ಬೈಪಾಸ್, ಲಕ್ಷ್ಮಣ ದೇವಾಡಿಗ ಆಕಳಬೈಲು, ಮಂಜುನಾಥ ಪಿ.ಗಂಗೆಬೈಲು ಹಾಗೂ ತಂತ್ರಿಗಳು, ಅರ್ಚಕವೃಂದ, ಉಪಾದಿವಂತರು, ಸಿಬ್ಬಂದಿವರ್ಗ, ವಾದ್ಯವೃಂದ ಹಾಗೂ ಊರ ಹತ್ತು ಸಮಸ್ತರ ಉಪಸ್ಥಿತರಿದ್ದರು