ಬೈಂದೂರು: ತಾಲೂಕಿನ ತ್ರಾಸಿ ಗ್ರಾಮದ ಶ್ರೀರಾಮ, ಶ್ರೀಗಣಪತಿ, ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು. ಶ್ರೀದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುಣಪತಿ ಪೂಜೆ,ಸ್ವಸ್ತಿ ಪುಣ್ಯಾಹ ವಾಚನ, ಶ್ರೀರಾಮ, ಶ್ರೀಗಣಪತಿ, ಶ್ರೀಅಯ್ಯಪ್ಪ ಸ್ವಾಮಿ ದೇವರಿಗೆ ಅಷ್ಟಬಂಧನ ಲೇಪನ, ಕಲಾತತ್ವ ಹೋಮ, ಮಹಾಪೂಜೆ,ಶ್ರೀರಾಮ ದೇವರಿಗೆ ಅಷ್ಟೋತ್ತರ ಪರಿಕರ ಕಲಶ ಸಹಿತ ಬ್ರಹ್ಮ ಕಲಶ ಸ್ಥಾಪನೆ, ಶ್ರೀಗಣಪತಿ ಮತ್ತು ಶ್ರಿಅಯ್ಯಪ್ಪ ಸ್ವಾಮಿ ದೇವರಿಗೆ ಪಂಚವಿಂಶತಿ ಕಲಶ ಸ್ಥಾಪನೆ,ಅಧಿವಾಸ ಹೋಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ವೈಭವ,ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಎಲ್ಲಾ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಅರ್ಚಕ ವೃಂದದವರು ಉಪಸ್ಥಿತರಿದ್ದರು.
ಏಪ್ರಿಲ್ 6 ರ ಶನಿವಾರ ದಂದು ಬೆಳಿಗ್ಗೆ 6.30 ರಿಂದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಆರಂಭಗೊಳ್ಳಲಿದೆ, ಮಹಾಪೂಜೆ, ಧಾರ್ಮಿಕ ಪ್ರವಚನ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ, ಭಕ್ತಿ ರಸಮಂಜರಿ ಕಾರ್ಯಕ್ರಮ, ಶ್ರೀರಾಮ ದರ್ಶನಂ ಯಕ್ಷಗಾನ ಕಾರ್ಯಕ್ರಮ ಜರುಗಲಿದೆ.