Monday, February 10, 2025
Homeಉಜಿರೆಬೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

ಬೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

ಉಜಿರೆ: ವಿಕಲಾಂಗರಲ್ಲಿ ವಿಶೇಷಚೇತನ ಮತ್ತು ಪ್ರತಿಭೆ ಇದ್ದು, ತಮಗೆ ಸಿಗುವ ಅವಕಾಶಗಳು ಮತ್ತು ಸೌಲಭ್ಯಗಳ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್, ಎಸ್.ಎಸ್. ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಟಿ.ಬಿ. ಆಸ್ಪತ್ರೆ ಆವರಣದಲ್ಲಿರುವ ಜಾಗೃತಿಸೌಧದಲ್ಲಿ ಮದ್ದಡ್ಕದಲ್ಲಿರುವ ಬೈಟ್ ಟ್‌ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ ಶುಭ ಹಾರೈಸಿದರು. ವಿಕಲಚೇತನರು ಒಲಿಂಪಿಕ್ಸ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಕೀಳರಿಮೆ ತೊರೆದು ಬದುಕಿನಲ್ಲಿ ನವಚೈತನ್ಯದಿಂದ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಮನೆಯಲ್ಲಿ ಹಾಗೂ ಸಮಾಜದಲ್ಲಿ  ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ “ವಾತ್ಸಲ್ಯ”  ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಿಟ್‌ಗಳ ಮೂಲಕ ಬಟ್ಟೆ, ಪೌಷ್ಠಿಕಆಹಾರ ಮೊದಲಾದ ಮೂಲಭೂತ ಸೌಲಭ್ಯಗನ್ನು ಒದಗಿಸಲಾಗಿದೆ. ಇಪ್ಪತ್ತು ಸಾವಿರ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.
ಸಾಧನಾ ಸಲಕರಣೆಗಳ ವಿತರಣೆ: ಗಾಲಿಕುರ್ಚಿ: 8 ,ಊರುಗೋಲು: 6, ವಾಕರ್:6, ಎಲ್ಬೊ ಕ್ಲಚ್:9, ವಾಟರ್‌ಬೆಡ್: 4, ಒಟ್ಟು 33 ಮಂದಿ ವಿಕಲಚೇತನರಿಗೆ ಸಾಧನಾಸಲಕರಣೆಗಳನ್ನು ವಿತರಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್‌ಪಾಸ್, ಬೈಟ್ಇಂಡಿಯಾದ ಸದಸ್ಯ ಜಯಶಂಕರ ಶರ್ಮಾ ಉಪಸ್ಥಿತರಿದ್ದರು.
ಬೈಟ್ಇಂಡಿಯಾದ ಕೋಶಾಧಿಕಾರಿ ಶಿಶುಪಾಲ ಪೂವಣಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಜ್ರನಾಭಯ್ಯ ಧನ್ಯವಾದವಿತ್ತರು.

RELATED ARTICLES
- Advertisment -
Google search engine

Most Popular