ಪಾಕಿಸ್ತಾನದ ಕುನ್ನಿಗಳನ್ನು ಖಾದರ್‌ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ. ರವಿ ಖಡಕ್ ವಾಗ್ದಾಳಿ

0
149

ಮಂಗಳೂರು: ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಪ್ರಚೋದನೆಯಾಗಿದ್ದರೆ ಅಂತಹವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ. ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿಕೆ ನೀಡಿರುತ್ತಾರೆ. ಹಾಗಾದರೆ ಅವರೇ ಪಾಕಿಸ್ತಾನದ ಕುನ್ನಿಗಳನ್ನು ಗಡಿಪಾರು ಮಾಡಿಸಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಬೊಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದ್ದಾರೆ. ಭಾರತ್‌ ಮಾತಾ ಕೀ ಜೈ ಎನ್ನುವುದನ್ನು ಸಹಿಸಲಾಗದು ಎಂದರೆ ಏನರ್ಥ? ಪಾಕಿಸ್ತಾನದ ಕುನ್ನಿಗಳೇ ಎನ್ನುವುದು ತಮಗೇ ಎಂದು ಕೆಲವರು ಅರ್ಥೈಸಿಕೊಂಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here