Wednesday, July 24, 2024
Homeರಾಜ್ಯಬ್ರೇಕಪ್ ನಂತರ ಮಾಜಿ ಗೆಳತಿಗೆ ಖರ್ಚಿನ ಬಿಲ್ ಕಳುಹಿಸಿದ ಸಿಎ ಬಾಯ್ ಫ್ರೆಂಡ್: ಸೋಶಿಯಲ್ ಮೀಡಿಯಾದಲ್ಲಿ...

ಬ್ರೇಕಪ್ ನಂತರ ಮಾಜಿ ಗೆಳತಿಗೆ ಖರ್ಚಿನ ಬಿಲ್ ಕಳುಹಿಸಿದ ಸಿಎ ಬಾಯ್ ಫ್ರೆಂಡ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಬ್ರೇಕಪ್ ಸ್ಟೋರಿ ವೈರಲ್ ಆಗುತ್ತಿದ್ದು, ಬ್ರೇಕಪ್ ನಂತರ ಸಿಎ ಬಾಯ್ ಫ್ರೆಂಡ್ ತನ್ನ ಮಾಜಿ ಗೆಳತಿಗೆ ಖರ್ಚಿನ ಸಂಪೂರ್ಣ ಪಟ್ಟಿಯನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಒಟ್ಟು 7 ತಿಂಗಳ ಸಂಬಂಧದಲ್ಲಿ ಆತ ಆಕೆಗಾಗಿ ಖರ್ಚು ಮಾಡಿದ ಪ್ರತಿಯೊಂದು ದುಡ್ಡನ್ನು ಕೂಡ ಲೆಕ್ಕ ಹಾಕಿ ಆಕೆಗೆ ಸಂಪೂರ್ಣ ಬಿಲ್ ಕಳುಹಿಸಿದ್ದಾನೆ.

ಎಕ್ಸೆಲ್ ಶೀಟ್ ಸಿದ್ದಪಡಿಸಿ ಅದರಲ್ಲಿ ಪ್ರತೀ ತಿಂಗಳು ಆದ ಖರ್ಚು ಅಂದರೆ ಕಾಫಿಯಿಂದ, ಡಿನ್ನರ್ ಡೇಟ್, ನೈಟ್ ಪಾರ್ಟಿ, ವ್ಯಾಲೆಂಟೈನ್ ಡೇ ಗಿಫ್ಟ್ ವರೆಗೆ ಖರ್ಚಾದ ದುಡ್ಡನ್ನು ಮರು ಪಾವತಿಸುವಂತೆ ಹೇಳಿದ್ದಾನೆ.

ಇದೀಗ ಒಟ್ಟು ಖರ್ಚಾದ ಹಣದ ಬಿಲ್‌ನ ಎಕ್ಸೆಲ್ ಶೀಟ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಪೋಸ್ಟ್ ಹಂಚಿಕೊಂಡ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚುಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿ ಪೋಸ್ಟ್‌ನಲ್ಲಿ ಹೇಳಿದ ಪ್ರಕಾರ ಏಳು ತಿಂಗಳಿನಿಂದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಅದರಲ್ಲಿ ಒಟ್ಟು ಸುಮಾರು 1 ಲಕ್ಷದ 2 ಸಾವಿರ ರೂ. ಖರ್ಚಾಗಿದೆ. ಅದರಲ್ಲಿ ಅರ್ಧದಷ್ಟು ಕಡಿಮೆ ಮಾಡಿ, ಜೊತೆಗೆ ವೆಚ್ಚಕ್ಕೆ 18 ಪರ್ಸೆಂಟ್ ಜಿಎಸ್ಪಿ ಕೂಡ ಸೇರಿಸಿ ಬಿಲ್‌ನ ಎಕ್ಸೆಲ್ ಶೀಟ್ ಸಿದ್ಧಪಡಿಸಿ ಯುವತಿಗೆ ಕಳುಹಿಸಿದ್ಧಾನೆ.

RELATED ARTICLES
- Advertisment -
Google search engine

Most Popular