ಮೂಡುಬಿದಿರೆ: ಪ್ರೌಢಾವಸ್ಥೆಯ ಸಿಹಿ ಪ್ರಣಯದ “ಕೇಬಲ್ ಕನೆಕ್ಷನ್” ಕಿರುಚಲನಚಿತ್ರವು “JRM ಸ್ಟುಡಿಯೋ” ಯೂಟ್ಯೂಬ್ ಚಾನೆಲ್ ನಲ್ಲಿ ಮಾರ್ಚ್ 14ರಂದು ಬಿಡುಗಡೆಗೊಂಡಿದೆ. ಈ ಕಿರುಚಿತ್ರವು ಮಂಗಳೂರಿನ ಇಬ್ಬರು ಯುವ ವ್ಯಕ್ತಿಗಳಾದ ಸನತ್ ಮತ್ತು ಕಾವ್ಯಾ ಇವರ ನಡುವಿನ ಪ್ರೇಮ ಪ್ರಸಂಗವು ಹೇಗೆ ಕೇಬಲ್ ಕನೆಕ್ಷನ್ ಮೂಲಕ ಮೂಡುತ್ತದೆ ಎಂದು ಅದ್ಭುತವಾಗಿ ಚಿತ್ರಕರಿಸಲಾಗಿದೆ.
ತುಳುನಾಡಿನ ಯುವ ಕಲಾವಿದರಾದ ಮಜಾ ಭಾರತ ಖ್ಯಾತಿಯ ಶಿವರಾಜ್ ಕರ್ಕೇರಾ ಸನತ್ .ಕೆ, ಸಾನಿಕಾ ಪೂಜಾರಿ, ನಿತಿನ್ ಅಮೀನ್, ಸುಖೇಶ್ ವೇಣೂರ್, ನಟಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಕಲಾ ನಿರ್ದೇಶಕ ಮನಮೋಹನ್ ಅಡೂರ್ ನಿರ್ದೇಶನದಲ್ಲಿ, ಕಲರ್ಸ್ ಕನ್ನಡದ ಕಲಾ ನಿರ್ದೇಶಕ – ಸಂತೋಷ ಪೂಜಾರಿ, ಮತ್ತು ವಿನುತ ಪೂಜಾರಿ ನಿರ್ಮಾಪಕರಾಗಿ ನಮಹಾ ಸ್ಟುಡಿಯೋಸ್ ನಿರ್ಮಾಣದಲ್ಲಿ ಕೇಬಲ್ ಕನೆಕ್ಷನ್ ಕಿರು ಚಿತ್ರವು ಅದ್ಭುತವಾಗಿ ಮೂಡಿಬಂದಿದೆ.
ತುಳುನಾಡಿನ ಯುವ ಪ್ರತಿಭೆಗಳ ಅಭಿನಯದ “ಕೇಬಲ್ ಕನೆಕ್ಷನ್” ಕಿರುಚಿತ್ರ ಬಿಡುಗಡೆ
RELATED ARTICLES