Sunday, January 19, 2025
HomeUncategorized"ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ-2025" ರ ನಿಮಿತ್ತವಾಗಿ ಪ್ರಶಸ್ತಿ...

“ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ-2025” ರ ನಿಮಿತ್ತವಾಗಿ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ : ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು “ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ-2025” ರ ನಿಮಿತ್ಯವಾಗಿ ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿಯಿಂದ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಕನ್ನಡ ನಾಡು ನುಡಿ ಮತ್ತು ಇತಿಹಾಸ ಸೇರಿ ಹಲವು ರಂಗಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವವರು ಅರ್ಜಿ ಸಲ್ಲಿಸ ಬಹುದು. ಆಯ್ಕೆಯಾದ ಪ್ರತಿಭಾನ್ವಿತ ಸಾಧಕರಿಗೆ ಆಯ್ಕೆ ಪತ್ರವನ್ನು 01 ಜನವರಿ 2025 ರಂದು ಮತ್ತು ಪ್ರಶಸ್ತಿಯನ್ನು 12 ಜನವರಿ 2025 ರ ರವಿವಾರದಂದು ಅಂತರ್ಜಾಲದ ಸಹಾಯದಿಂದ ಸಮಾರಂಭವನ್ನು ಆಯೋಜಿಸಿ ಗೌರವ ಪೂರ್ವಕವಾಗಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ವೇದಿಕೆಯ ಅಧ್ಯಕ್ಷರಾದ ಕವಿತ್ತ ಕರ್ಮಮಣಿ ಅವರ ವಾಟ್ಸಾಪ್ 9743867298 ನಂಬರಿಗೆ ಸಂಪರ್ಕಿಸುವಂತೆ ವೇದಿಕೆಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular