Friday, February 14, 2025
HomeUncategorizedಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ರಕ್ಷಣೆ ಮತ್ತು ಸಾಮಾಜಿಕ ಸಹಕಾರಕ್ಕೆ ಕರೆ"

ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ರಕ್ಷಣೆ ಮತ್ತು ಸಾಮಾಜಿಕ ಸಹಕಾರಕ್ಕೆ ಕರೆ”

ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ 2014 ಮತ್ತು 2019 ರ ನಿಯಮಾವಳಿಯಂತೆ ಮಂಗಳೂರಿನ ಹೃದಯ ಭಾಗದ ಕಂಟೋನ್ಮೆಂಟ್ 46 ವಾರ್ಡ್ ನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಬೀದಿಬದಿ ಪಟ್ಟಣ ವ್ಯಾಪಾರ ಸಮಿತಿಯ ನಿರ್ಣಯದಂತೆ ಬೀದಿಬದಿ ವ್ಯಾಪಾರ ವಲಯವನ್ನು ತಾರೀಕು 23/ 12/ 2024 ರಂದು ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ಆಶಯದಂತೆ ಉದ್ಘಾಟನೆಗೊಂಡಿದೆ .ಇದಕ್ಕೆ ಸಹಕರಿಸಿದ ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಆದ ಆನಂದ್ ಸಿ ಎಲ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದಿಂದ ಹೃತ್ಪೂರ್ವಕ ಧನ್ಯವಾದಗಳು .ಈಗಾಗಲೇ ಕೆಲವು ಬೀದಿಬದಿ ವ್ಯಾಪಾರಸ್ಥರು ಬೀದಿ ಬದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಆರಂಭಿಸಿದ್ದಾರೆ,ಆದರೆ ಕೆಲವು ಬೀದಿಬದಿ ವ್ಯಾಪಾರಸ್ಥರಿಗೆ ಆ ವಲಯದಲ್ಲಿ ಮೂಲಭೂತ ಸೌಕರ್ಯವಿಲ್ಲ ಅವೈಜ್ಞಾನಿಕ ಎಂದು ಕೆಲವರಿಗೆ ತಪ್ಪು ಸಂದೇಶ ನೀಡಿ ಸೋಮವಾರ ಪ್ರತಿಭಟನೆ ಮಾಡುವ ಎಂದು ಕೆಲವು ರಾಜಕೀಯ ಹಿತಾಸಕ್ತಿಗಳು ಅವರ ಪಕ್ಷದ ರಾಜಕೀಯ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ತನ್ನ ವೈಯಕ್ತಿಕ ಪ್ರಚಾರವನ್ನು ತೆಗೆದುಕೊಳ್ಳುವ ಸಲುವಾಗಿ ಬೀದಿ ಬದಿ ವ್ಯಾಪಾರಸ್ಥರನ್ನು ತಪ್ಪು ದಾರಿಗೆ ಎಳೆದು ಅವರ ದೈನಂದಿನ ಬದುಕಿನ ವಿರುದ್ಧವಾಗಿ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ . ಆ ಕಾರಣವಾಗಿ ಅಧಿಕೃತ ಬೀದಿಬದಿ ವ್ಯಾಪಾರಸ್ಥರು ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಇದ್ದವರು ಇದಕ್ಕೆಲ್ಲ ಗಮನ ಕೊಡದೆ ತಮಗೆ ಕೊಟ್ಟಂತಹ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಬೇಕು . ಏನಾದರೂ ವಲಯದಲ್ಲಿ ಕುಂದು ಕೊರತೆ ಇದ್ದಲ್ಲಿ ಪಟ್ಟಣ ವ್ಯಾಪಾರ ಸಮಿತಿ/ಕುಂದು ಕೊರತೆ ನಿವಾರಣ ಸಮಿತಿ/ಮೇಲ್ಮನವಿ ಪ್ರಾಧಿಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶ್ರೇಯೋಭಿವೃದ್ಧಿ ಸಂಘವು ಸದಾ ಬಡ ಬೀದಿಬದಿ ವ್ಯಾಪಾರಸ್ಥರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ 2014 ಮತ್ತು 2019 ರ ನಿಯಮಾವಳಿಗೆ ಗೌರವ ಕೊಟ್ಟು, ಮಂಗಳೂರು ಮಹಾನಗರ ಪಾಲಿಕೆಯಿಂದ ಒದಗಿಸಿರುವ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ಗಳನ್ನು ಪಾಲಿಕೆಯು ರದ್ದು ಪಡಿಸಲು ಅವಕಾಶ ಕೊಡದೆ, ಯೋಜನೆ ಯ ಸದುಪಯೋಗ  ಪಡೆಯಲು ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ) ಶ್ರಮಿಸುತ್ತಿದೆ, ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ 2014 ಮತ್ತು 2019 ರ ನಿಯಮಾವಳಿಗೆ ವಿರುದ್ದ ವಾಗಿ,ಯಾರದೋ ಸ್ವಾರ್ಥ ಉದ್ದೇಶಕ್ಕೆ ತಮ್ಮ ಜೀವನೋಪಾಯ ಕ್ಕೆ ಸಿಕ್ಕಿರುವ ವ್ಯಾಪಾರ ವಲಯದ ಸೌಲಭ್ಯಗಳನ್ನು ಕಳೆದುಕೊಂಡು ನಿಮ್ಮನ್ನು ನಂಬಿರುವ ಕುಟುಂಬಕ್ಕೆ  ರಕ್ಷಣೆ ಕೊಡಲು ಯಾರು ಸಹಾಯ ಮಾಡಲಾರರು, ಆದುದರಿಂದ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಯಾವುದೇ ಬಾಹ್ಯ ಒತ್ತಡಕ್ಕೆ ಸಿಲುಕದೆ ಬೀದಿ ಬದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಕೋರುತ್ತಿದ್ದೇವೆ 

ಅಧ್ಯಕ್ಷರು :ಮಹಮ್ಮದ್ ಮುಸ್ತಫಾ

ಪ್ರಧಾನ ಕಾರ್ಯದರ್ಶಿ:ಹರೀಶ್ ಪೂಜಾರಿ

ಕೋಶಾಧಿಕಾರಿ :ಮಹಮ್ಮದ್ ಆಸಿಫ್

RELATED ARTICLES
- Advertisment -
Google search engine

Most Popular