ಕೆನರಾ ಅಸೋಸಿಯೇಷನ್(ರಿ), ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ಇದರ 15ನೇ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 11.01.2025 ರಂದು ಅಮೃತಾಯ ಫಂಕ್ಷನ್ ಹಾಲ್, ಅನಂತನಗರದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷರಾದ ಸತೀಶ್ ಕುಮಾರ್ ಅವರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಖ್ಯಾತ ಸಿನಿಮಾ ನಟಿ ಶ್ರೀಮತಿ ಭವ್ಯಶ್ರೀ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2024 -25 ನೇ ಸಾಲಿನ ಅಸೋಸಿಯೇಷನ್ ಪ್ರತಿಷ್ಠಿತ “ಕೆನರಾರತ್ನ” ಪ್ರಶಸ್ತಿಯನ್ನು ವೃತ್ತಿರಂಗ ಮತ್ತು ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಶೀನಪ್ಪ ಗೌಡ ಮಾಲ ಇವರಿಗೆ ನೀಡಲಾಯಿತು.
ಸಭಾ ಕಾರ್ಯಕ್ರಮವು ಮಮತ ಲೋಕೇಶ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅವರು ಅಸೋಸಿಯೇಷನ್ ಬೆಳೆದು ಬಂದ ರೀತಿ, ಉದ್ದೇಶ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಮುಖ್ಯ ಅತಿಥಿ ಶ್ರೀಮತಿ ಭವ್ಯಶ್ರೀ ರೈ ಅಸೋಸಿಯೇಷನ್ ನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತುಳುಭಾಷೆ, ತುಳು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕೆನರಾ ಆಸೋಸಿಯೇಷನ್ ನ ಪಾತ್ರ ಮಹತ್ತರ ಎಂದು ಹೇಳಿದರು. ಕೆನರಾ ರತ್ನ ಪ್ರಶಸ್ತಿ ವಿಜೇತ ಶ್ರೀ ಶೀನಪ್ಪ ಗೌಡ ಇವರು ಮಾತನಾಡಿ ಅಸೋಸಿಯೇಷನ್ ಸಮಾಜಕ್ಕೆ ನೀಡಿದ ಸೇವೆಗಳನ್ನು ನೆನಪಿಸಿ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿ, ಈ ಪ್ರಶಸ್ತಿಯು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ, ಸೇವೆ ಮಾಡಲು ಸ್ಪೂರ್ತಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆನರಾ ರತ್ನ ಪ್ರಶಸ್ತಿ ಸಮಾರಂಭವನ್ನು ಆಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀ ವಿಜಯ್ ಕುಲಾಲ್ ಎಂ. ನೆರವೇರಿಸಿದರು. ತುಳು ಭಾಷಣ ಸ್ಪರ್ಧೆ, ಕೃಷ್ಣ ರಾಧೆ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀಪುರುಷೋತ್ತಮ ದೇರಾಜೆ, ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪಾವನಿ ಕೆ.ಎಲ್, ಶಿವಾನಿ ಕೆ.ಎಲ್ ಗೂ ಎಸ್ಎಸ್ಎಲ್ಸಿಯಲ್ಲಿಅತ್ಯಧಿಕ ಅಂಕ ಪಡೆದ ಕು|ಕುಶ್ಮಿತ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಕು| ವೃದ್ಧಿಇವರುಗಳನ್ನು ಸನ್ಮಾನಿಸಲಾಯಿತು. ಜತೆ ಕೋಶಾಧಿಕಾರಿ ಶ್ರೀ ಸಚಿನ್ ರೈ ವಂದನಾರ್ಪಣೆ ಗೈದರು. ವೇದಿಕೆಯಲ್ಲಿ ಕೋಶಾಧಿಕಾರಿ ಶ್ರೀ ವಿಠ್ಠಲ್ ಗೊಲ್ಲ, ಸಂಘಟನಾ ಕಾರ್ಯದರ್ಶಿ ಯೋಗೇ ಸ್ ದೇರಾಜೆ, ಜತೆ ಕಾರ್ಯದರ್ಶಿ ಶ್ರೀಮತಿ ಶ್ವೇತಾ ಆರ್ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ವಸಂತ್ ಪೂಜಾರಿ, ಶ್ರೀ ಯಶ್ವಂತ್, ಶ್ರೀ ಸುಭಾಷ್ ಇವರುಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಮೇಶ್ಚಂದ್ರ ನೇತೃತ್ವದ ಐಲೆಸಾ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ತುಳುನಾಡ ಶೈಲಿಯ ಭೋಜನವನ್ನು ಏರ್ಪಡಿಸಲಾಗಿತ್ತು. ಶ್ರೀ ವಿವೇಕ್ ರೈ ಕಾರ್ಯಕ್ರಮ ನಿರೂಪಿಸಿದರು.