ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಬಂಗೇರರು ಕರಾವಳಿಯ ಹಿರಿಯ ರಾಜಕಾರಣಿ, ಧೀಮಂತ ನಾಯಕ, ತಾನು ನಂಬಿದ ಮೌಲ್ಯಗಳೊಂದಿಗೆ ಬಾಳಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಸ್ವಚ್ಛ ರಾಜಕಾರಣಿಯಾಗಿದ್ದರು.
ವಸಂತ ಬಂಗೇರ ಅವರ ನಿಧನದಿಂದ ಕರಾವಳಿ ಕರ್ನಾಟಕದ ರಾಜಕೀಯ ಕ್ಷೇತ್ರ ಸಂಪೂರ್ಣ ಬಡವಾಗಿದೆ ಅವರ ಅಗಲುವಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೂ ಮತ್ತು ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತಾ ಅಗಲಿದ ಚೇತನಕ್ಕೆ ಸದ್ಗತಿಯನ್ನು ಕೋರುತ್ತೇನೆ ಎಂದು ರಾಜ್ಯ ಕರ್ನಾಟಕ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂತಾಪ ಸೂಚಿಸಿದರು