ದಾವಣಗೆರೆ: ನಗರದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಶ್ರೀರಾಮ ಸೇನೆಯ ಮುಖಂಡ ಮಣಿ ಸರ್ಕಾರ್ ತೀವ್ರ ಗಾಯಗೊಂಡಿದ್ದಾರೆ. ನಗರದ ಕ್ಲಾಕ್ ಟವರ್ ಬಳಿ ಬುಧವಾರ ಬೆಳಿಗ್ಗೆ ನಡೆದ ಅಪಘಾತದಲ್ಲಿ ಅವರು ಗಾಯಗೊಂಡಿದ್ದಾರೆ. ಅತಿಯಾಗಿ ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ಬೈಕ್ ಹಾಗೂ ಸರ್ಕಲ್‌ನ ಕಟ್ಟೆಗೆ ಡಿಕ್ಕಿ ಹೊಡೆದಿದೆ.
ಕಾರು ಚಲಾಯಿಸುತ್ತಿದ್ದ ಮಣಿ ಸರ್ಕಾರ್ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಹಾಲೇಶ್ ಅವರನ್ನು ಸಿ.ಜೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿ ಸರ್ಕಾರ್ ಅವರ ಎರಡು ಕಾಲುಗಳಿಗೆ ಗಂಭೀರ ಏಟಾಗಿದೆ. ಸರ್ಕಲ್‌ನ ಕಟ್ಟೆಗೆ ಡಿಕ್ಕಿ ಹೊಡೆದ ಕಾರು ಪಕ್ಕದ ಸೆಕೆಂಡ್ಸ್ ಕಾರು ಶೋ ರೂಂಗೆ ನುಗ್ಗಿದ್ದು, ಅಲ್ಲಿದ್ದ ಎರಡು ಕಾರುಗಳಿಗೆ ಹಾನಿಯಾಗಿದೆ.