ಸುಳ್ಯ: ಇಲ್ಲಿನ ಅರಂತೋಡು ಕೊಲ್ಚಾರು ಬಂದಡ್ಕ ಸಂಪರ್ಕ ರಸ್ತೆಯ ಮಧ್ಯೆ ಕಣಕ್ಕೂರು ತಿರುವಿನಲ್ಲಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಸಂಪೂರ್ಣ ಉಲ್ಟಾ ಆಗಿ ನಿಂತಿದೆ.
ಕೇರಳದ ಬಂದಡ್ಕದಿಂದ ಸುಳ್ಯ ಕಡೆಗೆ ಬರುತ್ತಿದ್ದ ವೊಕ್ಸ್‌ವೇಗನ್ ಕಾರು ಕಣಕ್ಕೂರು ತಿರುವಿನಲ್ಲಿ ಪಲ್ಟಿಯಾಗಿದೆ. ಕಾರಿನಲ್ಲಿ ಒಬ್ಬ ಮಹಿಳೆ ಸಹಿತ ಇಬ್ಬರು ಇದ್ದರೆಂದು ತಿಳಿದುಬಂದಿದೆ. ಅಲ್ಪಸ್ವಲ್ಪ ಗಾಯಗೊಂಡಿದ್ದ ಅವರನ್ನು ಸುಳ್ಯದ ಖಾಸಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.