Wednesday, April 23, 2025
Homeಮೂಡುಬಿದಿರೆಶಿರ್ತಾಡಿ ಬಳಿ ಕಾರು-ಆಕ್ಟಿವಾ ಢಿಕ್ಕಿ: ಶಿಕ್ಷಕಿ ಮೃತ್ಯು

ಶಿರ್ತಾಡಿ ಬಳಿ ಕಾರು-ಆಕ್ಟಿವಾ ಢಿಕ್ಕಿ: ಶಿಕ್ಷಕಿ ಮೃತ್ಯು

ಶುಕ್ರವಾರ ಸಂಜೆ ಶಿರ್ತಾಡಿ ಬಳಿ ಸಂಭವಿಸಿದ ಕಾರು-ಆಕ್ಟಿವಾ ಅಪಘಾತದಲ್ಲಿ ಆಕ್ಟಿವಾ ಸವಾರೆ,ಶಿಕ್ಷಕಿ ಮೃತಪಟ್ಟಿದ್ದಾರೆ.

ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ (35) ಮೃತಪಟ್ಟವರು.
ಸುಜಯಾ ಅವರು ಶುಕ್ರವಾರ ಶಾಲೆಬಿಟ್ಟು ಮನೆಗೆ ಹೋಗುವಾಗ ಶಿರ್ತಾಡಿ ಸೇತುವೆ ಬಳಿ ಮೂಡುಬಿದಿರೆ ಕಡೆಯಿಂದ ಶಿರ್ತಾಡಿ ಕಡೆ ಬರುತ್ತಿದ್ದ ಹೋಂಡಾ ಸಿಟಿ ಕಾರು ಸುಜಯಾ ಅವರ ಆಕ್ಟಿವಾಕ್ಕೆ ಢಿಕ್ಕಿ ಹೊಡೆದಿದೆ.ಈ‌ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸುಜಯಾ ಅವರ ತಲೆಗೆ ತೀವ್ರ ತರದ ಗಾಯವಾಗಿತ್ತು.ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

ಸುಜಯಾ ಅವರು ಮೂಡುಬಿದಿರೆ ನಾಗರಕಟ್ಟೆ ನಿವಾಸಿಯಾಗಿದ್ದು ಅವರ ಪತಿ ವಿದೇಶದಲ್ಲಿದ್ದಾರೆ.ಅವರಿಗಿಬ್ಬರು ಅವಳಿಜವಳಿ ಮಕ್ಕಳಿದ್ದು ಮೂಡುಬಿದಿರೆ ಶಾಲೆಯಲ್ಲಿ ಕಲಿಯುತ್ತಿದ್ದಾರೆಂದು ತಿಳಿದು ಬಂದಿದೆ.

ಕಳೆದ ಕೆಲವು ವರ್ಷಗಳಿಂದ ಸುಜಯಾ ಅವರು ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular