ಉಪ್ಪಿನಂಗಡಿ: ಕಾರು ಬೈಕ್ ಗೆ ಡಿಕ್ಕಿಯಾಗಿ ಗಾಯಗೊಂಡಿದ್ದ ಸವಾರ ಸಾವನ್ನಪ್ಪಿದ್ದಾರೆ. ಏ 18ರಂದು ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಹಿರೆಬಂಡಾಡಿ ನಿವಾಸಿ 57ರ ಹರೆಯದ ವಿಶ್ವನಾಥ ಗೌಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಏ 18ರಂದು ರಾತ್ರಿ ಸಿಟಿ ಲ್ಯಾಂಡ್ ಹೋಟೆಲ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಆರೋಪಿ ಸಮೀರ್ ತಾನು ಚಲಾಯಿಸುತ್ತಿದ್ದ ರಿಡ್ಜ್ ಕಾರನ್ನು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದಿದ್ದ. ವಿಶ್ವನಾಥ ಅವರು ಇದೇ ವೇಳೆ ಉಪ್ಪಿನಂಗಡಿ ಕಡೆಯಿಂದ ಗಾಂಧಿ ಪಾರ್ಕ್ ಕಡೆಗೆ ಬುಲೆಟ್ ನಲ್ಲಿ ಬುಲೆಟಟ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿ ವಿಶ್ವನಾಥ ಅವರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.