ಚೆನ್ನೈ: ಚೆನ್ನೈ ಬಂದರಿನಲ್ಲಿ ಕಾರೊಂದು ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದಿದ್ದು, ಚಾಲಕ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಮಹಮ್ಮದ್ ಸಾಹಿ ನಾಪತ್ತೆಯಾಗಿರುವ ಕಾರು ಚಾಲಕ. ಓರ್ವ ನೌಕಾ ಸಿಬ್ಬಂದಿ ಗಾಯಗಳೊಂದಿಗೆ ಪಾರಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿವೆ. ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾಹಿ, ಟ್ಯಾಕ್ಸಿ ಸರ್ವಿಸ್ ಕಾರನ್ನು ಚಾಲನೆ ಮಾಡುತ್ತಿದ್ದು, ವಾಹನವನ್ನು ರಿವರ್ಸ್ ತೆಗೆಯುತ್ತಿದ್ದಾಗ ಅದು ಬರ್ತ್‌ನಿಂದ ನೀರಿಗೆ ಬಿದ್ದಿತು. ಅವರ ಜತೆ ಪ್ಯಾಸೆಂಜರ್ ಸೀಟ್ನಲ್ಲಿ ನೌಕಾಪಡೆಯ ಅಧಿಕಾರಿ ಇದ್ದರು ಅವರು ಕಾರಿನ ಕಿಟಕಿಯನ್ನು ಒಡೆದು ಹೊರಗೆ ಬಂದಿದ್ದಾರೆ. ಆದರೆ ಸಾಹಿ ಅವರ ಯಾವ ಮಾಹಿತಿಯೂ ತಿಳಿದುಬಂದಿಲ್ಲ.