Sunday, July 21, 2024
Homeಅಪಘಾತಕಂದಕಕ್ಕೆ ಉರುಳಿದ ಕಾರು: 4 ವರ್ಷದ ಬಾಲಕಿ ಸೇರಿ ಐದು ಮಂದಿ ಸಾವು

ಕಂದಕಕ್ಕೆ ಉರುಳಿದ ಕಾರು: 4 ವರ್ಷದ ಬಾಲಕಿ ಸೇರಿ ಐದು ಮಂದಿ ಸಾವು

ಜಮ್ಮು ಕಾಶ್ಮೀರ: ದೋಡಾ ಜಿಲ್ಲೆಯಲ್ಲಿ ಕಾರೊಂದು ರಸ್ತೆಯಿಂದ ಆಯತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ 4 ವರ್ಷದ ಬಾಲಕಿ ಸೇರಿದಂತೆ ಐದು ಮಂದಿ ಸಾವು, ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಿದ್ದಾರೆ.ವಾಹನವು ಥಾತ್ರಿಯಿಂದ ಕಥಾವಾಕ್ಕೆ ತೆರಳುತ್ತಿದ್ದಾಗ ಖಾನ್ಪುರದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಥಾತ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುರೇಶ್ ಗೌತಮ್, ಅಪಘಾತದಲ್ಲಿ ಮಹಿಳೆ ಮತ್ತು ನಾಲ್ಕು ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದು, ಐವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಂತಾಜನಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ನಾಲ್ವರನ್ನು ಮುಖ್ತಿಯಾರ್ ಅಹ್ಮದ್, ರಿಯಾಜ್ ಅಹ್ಮದ್, ಮೊಹಮ್ಮದ್ ರಫಿ, ಇರೀನಾ ಬೇಗಂ ಎಂದು ಪೊಲೀಸರು ಗುರುತಿಸಿದ್ದಾರೆ. ನಾಲ್ಕು ವರ್ಷದ ಬಾಲಕಿ ಮೊಹಮ್ಮದ್ ಅಮೀರ್ ಮತ್ತು ಸೈಮಾ ದಂಪತಿಯ ಪುತ್ರಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇತರರಲ್ಲಿ ಸೂಫಿಯಾನ್ ಶೇಖ್ ಮತ್ತು ಇಬ್ಬರು ಹುಡುಗಿಯರು ಸೇರಿದ್ದಾರೆ ಎಂದು ಅವರು ಹೇಳಿದರು.

RELATED ARTICLES
- Advertisment -
Google search engine

Most Popular