Monday, December 2, 2024
Homeರಾಜ್ಯತುಂಬಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಯ್ತು ಕಾರು | ಮರ ಏರಿದ್ದ ಚಾಲಕನ ರಕ್ಷಣೆ

ತುಂಬಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಯ್ತು ಕಾರು | ಮರ ಏರಿದ್ದ ಚಾಲಕನ ರಕ್ಷಣೆ

ಧಾರವಾಡ: ತುಂಬಿ ಹರಿಯುತ್ತಿದ್ದ ಶಾಲ್ಮಲಾ ನದಿಗೆ ಕಾರು ಸಮೇತ ಸಿಲುಕಿದ್ದ ಚಾಲಕನನ್ನು ರಕ್ಷಿಸುವಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ-ಬೇಗೂರು ನಡುವೆ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮದ ನಾಗರಾಜ ದೇಮಣ್ಣವರ ಬೇಗೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ನೀರಿನ ರಭಸಕ್ಕೆ ಕಾರು ಸಮೇತ ಕೊಚ್ಚಿ ಹೋಗಿತ್ತು. ಚಾಲಕ ಅಪಾಯಕ್ಕೆ ಸಿಲುಕಿದ್ದು, ಕೊಚ್ಚಿ ಹೋಗುವ ಸಮಯದಲ್ಲಿ ಕಾರಿನಿಂದ ಆತ ಮರವೇರಿದ್ದಾನೆ.

RELATED ARTICLES
- Advertisment -
Google search engine

Most Popular