Wednesday, July 24, 2024
HomeUncategorizedಮಂಗಳೂರಿನಿಂದ ಬರುತ್ತಿದ್ದ ಲಾರಿ ಕಣ್ಣೂರಿನಲ್ಲಿ ಕಾರಿಗೆ ಡಿಕ್ಕಿ: ಒಂದೇ ಕುಟುಂಬದ ಐವರು ಬಲಿ

ಮಂಗಳೂರಿನಿಂದ ಬರುತ್ತಿದ್ದ ಲಾರಿ ಕಣ್ಣೂರಿನಲ್ಲಿ ಕಾರಿಗೆ ಡಿಕ್ಕಿ: ಒಂದೇ ಕುಟುಂಬದ ಐವರು ಬಲಿ

ಕಾಸರಗೋಡು: ಕಣ್ಣೂರು ಜಿಲ್ಲೆಯ ಚೆರುಕುನ್ನು ಬಳಿಯ ಪುನ್ನಚೇರಿ ಎಂಬಲ್ಲಿ ಕಾರು-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ಕಾಸರಗೋಡು ಕಾಳೀಚನಡುಕ್ಕಂನ ಸಾಸ್ತಂಪರದ 59ರ ಹರೆಯದ ಕೆ.ಎನ್. ಪದ್ಮಕುಮಾರ್, 52ರ ಹರೆಯದ ಸುಧಾಕರನ್, 35ರ ಹರೆಯದ ಅಜತಾ, 65ರ ಹರೆಯದ ಕೊಜುಮ್ಮಲ್ ಕೃಷ್ಣನ್ ಮತ್ತು 9ರ ಹರೆಯದ ಆಕಾಶ್ ಮೃತಪಟ್ಟವರು.

ಚೆರುಕುನ್ನು ಬಳಿಕ ಪುನ್ನಚೇರಿಯ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಪಲ್ಟಿಯಾಗಿದೆ.

ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಮಂಗಳೂರಿನಿಂದ ಬರುತ್ತಿತ್ತು. ಸುಧಾಕರನ್ ಮತ್ತು ಅವರ ಕುಟುಂಬ ತಮ್ಮ ಮಗ ಸೌರವ್ ನನ್ನು ಕೋಝಿಕ್ಕೋಡ್ ನಲ್ಲಿರುವ ಶಿಕ್ಷಣ ಸಂಸ್ಥೆಗೆ ಸೇರಿಸಿ ನಂತರ ಕಾಸರಗೋಡಿಗೆ ಹಿಂತಿರುಗುತ್ತಿದ್ದರು. ಅಪಘಾತಕ್ಕೆ ಕಾರಣವಾದ ಎರಡು ಲಾರಿಗಳ ಇಬ್ಬರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   

RELATED ARTICLES
- Advertisment -
Google search engine

Most Popular