ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯೋತ್ಸವ ಆಚರಣೆಯ ವೇಳೆ ಯುವಕನೊಬ್ಬ ಹಲ್ಲಿನಿಂದ ಕಾರು ಎಳೆಯುವ ಮೂಲಕ ಗಮನ ಸೆಳೆದಿದ್ದಾನೆ. ಮಾನ್ವಿ ಸತೀಶ ಕೋನಾಪುರಪೇಟೆ ಎಂಬಾತ ಸ್ವಿಫ್ಟ್ ಡಿಸೈರ್ ಕಾರನ್ನು ಹಲ್ಲಿನಲ್ಲೇ ಎಳೆದು ಸಾಧನೆ ಪ್ರದರ್ಶಿಸಿದ್ದಾನೆ.
ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರ ಹಲ್ಲಿನಲ್ಲಿ ಕಾರು ಎಳೆದು ಎಲ್ಲರ ಮೆಚ್ಚುಗೆಗೆ ಸತೀಶ್ ಪಾತ್ರನಾಗಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸಹಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.