Monday, May 12, 2025
Homeಅಪಘಾತಕಾರು-ಸ್ಕೂಟರ್ ಪರಸ್ಪರ ಡಿಕ್ಕಿ: ವಾಹನಗಳು ಜಖಂ

ಕಾರು-ಸ್ಕೂಟರ್ ಪರಸ್ಪರ ಡಿಕ್ಕಿ: ವಾಹನಗಳು ಜಖಂ

ಮೂಲ್ಕಿ: ಇಲ್ಲಿ ಹಳೆಯಂಗಡಿ ಲೈಟ್ ಹೌಸ್ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡಿವೆ. ಕಾರು ಮತ್ತು ಸ್ಕೂಟರ್ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದಿವೆ.

ಪಕ್ಷಿಕೆರೆಯ ಹೊಸಕಾಡು ನಿವಾಸಿ, ಸ್ಕೂಟರ್ ಸವಾರ ಗೌರವ್ ಶೆಟ್ಟಿ ಹಳೆಯಂಗಡಿಯತ್ತ ಬರುತ್ತಿದ್ದಾಗ, ಪಕ್ಷಿಕೆರೆಯತ್ತ ಹೋಗುತ್ತಿದ್ದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿಯಾಗಿದೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular