Sunday, July 14, 2024
Homeಆರೋಗ್ಯಮತಗಟ್ಟೆಯಲ್ಲೇ ಮಹಿಳೆಗೆ ಹೃದಯ ಸ್ತಂಭನ: ಮಹಿಳೆಯ ಪ್ರಾಣ ಉಳಿಸಿದ ವೋಟಿಗೆ ಬಂದಿದ್ದ ವೈದ್ಯರು

ಮತಗಟ್ಟೆಯಲ್ಲೇ ಮಹಿಳೆಗೆ ಹೃದಯ ಸ್ತಂಭನ: ಮಹಿಳೆಯ ಪ್ರಾಣ ಉಳಿಸಿದ ವೋಟಿಗೆ ಬಂದಿದ್ದ ವೈದ್ಯರು

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಮತದಾನಕ್ಕೆ ಬಂದಿದ್ದ ವೇಳೆ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನವಾಗಿದೆ. ಈ ವೇಳೆ ಅಲ್ಲೇ ಇದ್ದ ವೈದ್ಯರೊಬ್ಬರು ಆಕೆಯ ಜೀವವನ್ನು ಉಳಿಸಿದ್ದಾರೆ. ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯ ಮತಗಟ್ಟೆಯಲ್ಲಿ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ವೈದ್ಯ ಡಾ. ಗಣೇಶ್ ಶ್ರೀನಿವಾಸ್ ಪ್ರಸಾದ್ ಅವರು ಮತದಾನಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ಸುಮಾರು 50 ವರ್ಷದ ಮಹಿಳೆಯೊಬ್ಬರು ಏಕಾಏಕಿ ಕುಸಿದು ಬಿದ್ದರು. ಈ ವೇಳೆ ಅಲ್ಲೇ ಇದ್ದವರು ಮಹಿಳೆಗೆ ನೀರು ಕುಡಿಸಿದರು. ಈ ವಿಚಾರ ಸಾಲಿನಲ್ಲಿದ್ದ ಡಾ. ಗಣೇಶ್ ಗಮನಕ್ಕೆ ಬಂದುದರಿಂದ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಮಹಿಳೆ ಕುಸಿದು ಬೀಳುತ್ತಿದ್ದಂತೆಯೇ ಅವರ ನಾಡಿಮಿಡಿತ ಪರೀಕ್ಷಿಸಿದೆ. ಅವರ ದೇಹ ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಜೊತೆಗೆ ಅವರಿಗೆ ಉಸಿರುಗಟ್ಟುತ್ತಿತ್ತು. ನಾನು ತಕ್ಷಣ ಸಿಪಿಆರ್ ಮಾಡಿದೆ. ಬಳಿಕ ಚುನಾವಣಾ ಸಿಬ್ಬಂದಿ ಬಂದು ಜ್ಯೂಸ್ ನೀಡಿದರು. ಆಂಬುಲೆನ್ಸ್ ನಲ್ಲಿ ಬಳಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಅವರು ಸುಧಾರಿಸಿದ್ದಾರೆ. ಸ್ವಲ್ಪ ತಡವಾಗಿದ್ದರೂ ಹೆಚ್ಚುಕಮ್ಮಿಯಾಗುತ್ತಿತ್ತು ಎಂದು ವೈದ್ಯ ಹೇಳಿದರು.

RELATED ARTICLES
- Advertisment -
Google search engine

Most Popular