ಕರ್ನಾಟಕದಲ್ಲಿ ಕಾರ್ಲ್ಸ್ ಬರ್ಗ್ ತನ್ನ ಮದ್ಯತಯಾರಿಕೆಯ ಶ್ರೇಷ್ಠತೆಗೆ ಬದ್ಧತೆಗೆ ಶಕ್ತಿ ನೀಡಿದ್ದು ಗ್ರಾಹಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ವಿಶ್ವಮಟ್ಟದ ಬಿಯರ್ ಗಳನ್ನು ಆವಿಷ್ಕಾರ ಮತ್ತು ಪ್ರೀಮಿಯರೈಸೇಷನ್ ಗೆ ಬದ್ಧತೆಯೊಂದಿಗೆ ಪ್ರತಿ ರುಚಿಗೂ ಹೊಂದುವಂತೆ ನೀಡುತ್ತಿದೆ. ಕಾರ್ಲ್ಸ್ ಬರ್ಗ್ ಇಂಡಿಯಾ ಮೈಸೂರಿನಲ್ಲಿ ತನ್ನ ಅತ್ಯಾಧುನಿಕ ಬ್ರ್ಯೂವರಿಯಿಂದ ಕರ್ನಾಟಕ ರಾಜ್ಯದಲ್ಲಿ ಎರಡಂಕಿ ಪ್ರಗತಿಯನ್ನು ಸಾಧಿಸುತ್ತಿದೆ
ಬೆಂಗಳೂರು, ಫೆಬ್ರವರಿ 7, 2025: ಕಾರ್ಲ್ಸ್ ಬರ್ಗ್ ತನ್ನ ಜಾಗತಿಕ ಪೋರ್ಟ್ ಫೋಲಿಯೊದಲ್ಲಿ ವಿಶ್ವಮಟ್ಟದ ಪ್ರಮುಖ ಬ್ರಾಂಡ್ ಗಳ ಮೂಲಕ ಮದ್ಯ ತಯಾರಿಕೆಯಲ್ಲಿ 177 ವರ್ಷಗಳ ಶ್ರೇಷ್ಠತೆಯನ್ನು ಸಂಭ್ರಮಿಸುತ್ತಿದೆ. ಗರಿಗರಿಯಾದ ದಣಿವಾರಿಕೆಯ ಟುಬೊರ್ಗ್ ಗ್ರೀನ್ ನಿಂದ ಕಾರ್ಲ್ಸ್ ಬರ್ಗ್ ಎಲಿಫೆಂಟ್ ದಿಟ್ಟ ಗುಣದವರೆಗೆ ಮತ್ತು ಪರಿಷ್ಕೃತ ಸಿಟ್ರಸ್ ಹೊಂದಿರುವ 1664 ಬ್ಲಾಂಕ್ ವರೆಗೆ ಕಾರ್ಲ್ಸ್ ಬರ್ಗ್ ಸುಮಾರು 200 ವರ್ಷಗಳ ಮದ್ಯ ತಯಾರಿಕೆಯ ಇತಿಹಾಸ ಮತ್ತು ಪರಂಪತೆ ಹೊಂದಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಮದ್ಯ ತಯಾರಿಕಾ ಘಟಕಗಳಲ್ಲಿ ರೂಪಿಸಿದ ಅಸಾಧಾರಣ ಬ್ರ್ಯೂಗಳ ಮೂಲಕ ಗ್ರಾಹಕರನ್ನು ಸಂತೋಷಗೊಳಿಸುವುದನ್ನು ಮುಂದುವರಿಸುತ್ತಿದೆ.
ಕಾರ್ಲ್ಸ್ ಬರ್ಗ್ ಇಂಡಿಯಾ ಕರ್ನಾಟಕದಲ್ಲಿ ಸದೃಢ ವ್ಯಾಪ್ತಿ ಹೊಂದಿದ್ದು ಮಾರಾಟದಲ್ಲಿ ಸದೃಢ ಎರಡಂಕಿ ಪ್ರಗತಿಯನ್ನು ಸಾಧಿಸಿರುವುದು ಗ್ರಾಹಕರ ವಿಕಾಸಗೊಳ್ಳುತ್ತಿರುವ ಆದ್ಯತೆಗಳು ಮತ್ತು ಪ್ರೀಮಿಯಂ ಬಿಯರ್ ಅನುಭವಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಸಾಕ್ಷಿಯಾಗಿದೆ. ಕಾರ್ಲ್ಸ್ ಬರ್ಗ್ ಎಲಿಫೆಂಟ್ ಮತ್ತು ಟುಬೊರ್ಗ್ ಕ್ಲಾಸಿಕ್ ಗಳ ಇತ್ತೀಚಿನ ಬಿಡುಗಡೆಯು, ಇದರೊಂದಿಗೆ ಸೂಪರ್-ಪ್ರೀಮಿಯಂ ವಿಭಾಗದಲ್ಲಿ 1664 ಬ್ಲಾಂಕ್ ಬಿಡುಗಡೆಯಾಗಲಿದ್ದು ಇವು ಗ್ರಾಹಕರಿಗೆ ವಿಸ್ತಾರ ಶ್ರೇಣಿಯ ರುಚಿಗಳನ್ನು ಆವಿಷ್ಕಾರಕ ಆಯ್ಕೆಗಳಿಂದಿಗೆ ನೀಡಲು ಕಾರ್ಲ್ಸ್ ಬರ್ಗ್ ಬದ್ಧತೆಯನ್ನು ತೋರುತ್ತದೆ.
“ವಿಶ್ವದ ಅತ್ಯಂತ ಗುರುತಿಸಲ್ಪಡುವ ಮದ್ಯ ತಯಾರಿಕೆಯ ಬ್ರಾಂಡ್ ಗಳಲ್ಲಿ ಒಂದಾದ ನಾವು ಸುದೀರ್ಘ ಕಾಲದಿಂದ ಗೌರವ ಪಡೆದ ತಂತ್ರಗಳು, ಪ್ರೀಮಿಯಂ ಗುಣಮಟ್ಟದ ಅಳವಡಿಕೆಗಳು ಮತ್ತು ಅತ್ಯಾಧುನಿಕ ಬ್ರೂವಿಂಗ್ ತಂತ್ರಜ್ಞಾನದ ಮೂಲಕ ಉನ್ನತ ಬಿಯರ್ ಅನುಭವಗಳನ್ನು ನೀಡಲು ಬದ್ಧರಾಗಿದ್ದೇವೆ” ಎಂದು ಕಾರ್ಲ್ಸ್ ಬರ್ಗ್ ಇಂಡಿಯಾದ Nilesh Patel, Managing Director, Carlsberg India, ಹೇಳಿದರು. “ಕರ್ನಾಟಕವು ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ನಾವು ಈ ಉಜ್ವಲ ಬಿಯರ್ ಸಂಸ್ಕೃತಿಯ ಭಾಗವಾಗಲು, ಗ್ರಾಹಕರಿಗೆ ವಿಸ್ತಾರ ರುಚಿಗಳು ಮತ್ತು ಆದ್ಯತೆಗಳಿಗೆ ಪುರೈಸಲು ಹೆಮ್ಮೆ ಪಡುತ್ತೇವೆ” ಎಂದರು.
ಅತ್ಯುತ್ತಮ ಬಿಯರ್ ಪೂರೈಕೆಯ ಆಚೆಗೂ ಕಾರ್ಲ್ಸ್ ಬರ್ಗ್ ಉತ್ತಮ ಇಂದು ಮತ್ತು ನಾಳೆಗೆ ಮದ್ಯ ತಯಾರಿಕೆಯಲ್ಲಿ ನಂಬಿಕೆ ಇರಿಸುತ್ತದೆ. ಸುಸ್ಥಿರತೆ, ಜವಾಬ್ದಾರಿಯುತ ಮದ್ಯಸೇವನೆ ಮತ್ತು ಸಮುದಾಯ ಸಕ್ರಿಯತೆಗೆ ಹೆಚ್ಚು ಆದ್ಯತೆ ನೀಡಿರುವ ಈ ಬ್ರಾಂಡ್ ಅರ್ಥಪೂರ್ಣ ಸಂಪರ್ಕಗಳನ್ನು ರೂಪಿಸಲು ಮತ್ತು ಭಾರತದ ಬಿಯರ್ ಉದ್ಯಮದ ಪ್ರಗತಿಗೆ ಕೊಡುಗೆ ನೀಡಲು ಬದ್ಧವಾಗಿದೆ.
ಈ ಪ್ರದೇಶದಲ್ಲಿ ಮುಂದುವರಿದ ಹೂಡಿಕೆಯ ಭಾಗವಾಗಿ ಕಾರ್ಲ್ಸ್ ಬರ್ಗ್ ಇಂಡಿಯಾ ಮುಂದಿನ ಇನ್ವೆಸ್ಟ್ ಕರ್ನಾಟಕ 2025 ಶೃಂಗದಲ್ಲಿ ಭಾಗವಹಿಸಲಿದ್ದು ರಾಜ್ಯಕ್ಕೆ ತನ್ನ ದೀರ್ಘಾವಧಿ ಬದ್ಧತೆಯನ್ನು ಮರು ದೃಢೀಕರಿಸುತ್ತದೆ.
ಕಾರ್ಲ್ಸ್ ಬರ್ಗ್ ಇಂಡಿಯಾ ಕುರಿತು
ಕಾರ್ಲ್ಸ್ ಬರ್ಗ್ ಇಂಡಿಯಾ ಜಾಗತಿಕವಾಗಿ ಖ್ಯಾತಿ ಪಡೆದ ಡೆನ್ಮಾರ್ಕ್ ನ ಕಾರ್ಲ್ಸ್ ಬರ್ಗ್ ಸಮೂಹದ ಭಾಗವಾಗಿದ್ದು ಸುಮಾರು ಎರಡು ಶತಮಾನಗಳ ಮದ್ಯ ತಯಾರಿಕೆಯ ಪರಂಪರೆಯನ್ನು ಭಾರತದ ಗ್ರಾಹಕರಿಗೆ ತಂದಿದೆ. ಗುಣಮಟ್ಟ ಮತ್ತು ಆವಿಷ್ಕಾರಕ್ಕೆ ತನ್ನ ಬದ್ಧತೆಯೊಂದಿಗೆ ಕಾರ್ಲ್ಸ್ ಬರ್ಗ್ ಇಂಡಿಯಾಭಾರತದಲ್ಲಿ ವಿಸ್ತಾರ ಮದ್ಯಗಳ ಪೋರ್ಟ್ ಫೋಲಿಯೊ ಹೊಂದಿದ್ದು ಅದರಲ್ಲಿ ಕಾರ್ಲ್ಸ್ ಬರ್ಗ್ ಸ್ಮೂಥ್, ಕಾರ್ಲ್ಸ್ ಬರ್ಗ್ ಎಲಿಫೆಂಟ್, ಟುಬೊರ್ಗ್ ಗ್ರೀನ್, ಟುಬೊರ್ಗ್ ಸ್ಟ್ರಾಂಗ್, ಟುಬೊರ್ಗ್ ಐಸ್ ಡ್ರಾಫ್ಟ್, ಟುಬೊರ್ಗ್ ಕ್ಲಾಸಿಕ್ ಮತ್ತು 1664 ಬ್ಲಾಂಕ್ ಒಳಗೊಂಡಿವೆ.