ಜಿಲ್ಲಾ ಕಂಬಳ ಸಮಿತಿಯ ಉನ್ನತ ಮಟ್ಟದ ಸಮಿತಿ ‘ಸಭೆ ಮಿಯ್ಯಾರು ಕಂಬಳ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿದ್ದರು. ಕಂಬಳ ಸಮಿತಿಯ ನಾನಾ ಪದಾಧಿಕಾರಿಗಳಾದ ಋಒಹಿತ್ ಶೆಟ್ಟಿ, ಎಸ್. ಕೋಟ್ಯಾನ್, ಲೋಕೇಶ್ ಶೆಟ್ಟಿ ಮುಚೂರು, ವಿಜಯಕುಮಾರ್ ಕಂಗಿನಮನೆ ಸತೀಶ್ಚಂದ್ರ ಸಾಲ್ಯಾನ್, ಚಂದ್ರಹಾಸ ಸನಿಲ್, ನವೀನ್ ಚಂದ್ರ ಆಳ್ವ, ಪ್ರಶಾಂತ್ ಕಾಜವ, ರಸ್ಟಿಕ್ ಶೆಟ್ಟಿ, ಅಂತೋನಿ ಡಿಸೋಜ ನಕ್ರೆ, ಕಂಬಳ ಕೋಣಗಳ ಯಜಮಾನರು, ಓಟಗಾರರು, ಬಿಡಿಸುವವರು ಮತ್ತು ತೀರ್ಪುಗಾರರು, ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಕಂಬಳಾಭಿಮಾನಿಗಳು ಭಾಗವಹಿಸಿದ್ದರು.
ಮಿಯ್ಯಾರು ಕಂಬಳ ವಿಳಂಬ ಮಿಯ್ಯಾರು ಕಂಬಳಕ್ಕೆ ಜ.4ರ ದಿನಾಂಕ ನಿಗದಿ – ಯಾಗಿದೆ. ಆದರೆ ಮಿಯ್ಯಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಕ್ಕೆ ಆಯೋಜಿಸುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಬಂದಿರುವುದರಿಂದ, ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಲಾಯಿತು.
24 ಗಂಟೆಯೊಳಗೆ ಮುಕ್ತಾಯ: ಕಂಬಳ ಸಿಸ್ತು ಬದ್ಧವಾಗಿ ಸಮಯಪಾಲನೆ ಮಾಡಿ ವ್ಯವಸ್ಥಿತ ರೀತಿಯಲ್ಲಿ ಕಂಬಳವನ್ನು ನಡೆಸಲಾಗಿದೆ 24 ಗಂಟೆಯೊಳಗೆ ಮುಕ್ತಾಯ ಮಾಡಬೇಕು.ವಿಳಂಬವಾಗದಂತೆ ರೂಪುರೇಷೆ ಸಿದ್ಧಪಡಿಸ ಲಾಗಿದೆ. ಇದಕ್ಕಾಗಿ ತಂತ್ರಜ್ಞಾನದಲ್ಲಿ ಸುಧಾರಣೆ ಮಾಡಲಾಗಿದೆ. ಸರಕಾರ ಮತ್ತು ಇತರ ಸಂಘಸಂಸ್ಥೆಗಳಲ್ಲಿ ಯಾವುದೇ ಆಕ್ಷೇಪ ಬಾರದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.