ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಮತ್ತು ಜೀವ ಬೆದರಿಕೆಯ ಆರೋಪದಡಿ ಈಗಾಗಲೇ ಜೈಲು ಸೇರಿದ್ದಾರೆ. ಇದೀಗ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ.
ಈಗಾಗಲೇ ಜೈಲಿನಲ್ಲಿರುವ ಮುನಿರತ್ನ ವಿರುದ್ಧ ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ. ನನ್ನ ಮೇಲೆ ಅತ್ಯಾಚಾರ ಆಗಿದೆ. ಕಗ್ಗಲೀಪುರದ ರೆಸಾರ್ಟ್‌ನಲ್ಲಿ ಈ ಕೃತ್ಯ ನಡೆದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ದೂರು ನೀಡಿದ್ದಾರೆ. ಮುನಿರತ್ನ ಸೇರಿ ಒಟ್ಟು 7 ಜನರ ವಿರುದ್ಧ ಕೇಸು ದಾಖಲಾಗಿದೆ. ಹೀಗಾಗಿ ಪೊಲೀಸರು ಬಿಎನ್ಎಸ್ 354ಎ, 354 ಸಿ, 376, 506, 504, 120(B), 149, 384, 406, 308 ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.