Saturday, September 14, 2024
Homeಅಪರಾಧಪ್ರಧಾನಿ ಮೋದಿಗೆ 'ಕೊಲೆ ಬೆದರಿಕೆ' ಪ್ರಕರಣ : ಆರೋಪಿ ವಿರುದ್ಧ 'FIR' ದಾಖಲು

ಪ್ರಧಾನಿ ಮೋದಿಗೆ ‘ಕೊಲೆ ಬೆದರಿಕೆ’ ಪ್ರಕರಣ : ಆರೋಪಿ ವಿರುದ್ಧ ‘FIR’ ದಾಖಲು

ಯಾದಗಿರಿ : ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ್ರೆ ಪಿಎಂ ಮೋದಿ ದೇಹದ ನರಗಳನ್ನು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್ ಎಂದು ದುಷ್ಕರ್ಮಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕೊಲೆ ಬೆದರಿಕೆ ಹಾಕಿ ಫೇಸ್‍ಬುಕ್‍ನಲ್ಲಿ ವೀಡಿಯೋ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯ ರಸೂಲ್ ವಿರುದ್ಧ ಸುರಪುರ ಠಾಣೆಯಲ್ಲಿ FIR ದಾಖಲಾಗಿದೆ.

ಸುರಪುರದ ರಂಗಂಪೇಟೆ ನಿವಾಸಿ ಮಹಮದ್ ರಸೂಲ್ ಕಡ್ದಾರೆ ಎಂಬಾತ ಕೈಯಲ್ಲಿ ತಲವಾರು ಹಿಡಿದು ಮೋದಿ ಹಾಗೂ ಯೋಗಿ ವಿರುದ್ಧ ಪೇಸ್‍ಬುಕ್ ಪೇಜ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡೋದಾಗಿ ಬೆದರಿಕೆಯ ವೀಡಿಯೋ ಹರಿಬಿಟ್ಟಿದ್ದಾನೆ. ಹೈದ್ರಾಬಾದ್‍ನಲ್ಲಿ ಕೂಲಿ ಕೆಲಸ ಮಾಡುವ ಮಹಮದ್ ರಸೂಲ್ ಅಲ್ಲಿಂದಲೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವೀಡಿಯೋ ಅಪ್ಲೋಡ್ ಮಾಡಿದ್ದಾನೆ.

ಕಾಂಗ್ರೆಸ್ ಆಡಳಿತದಲ್ಲಿ ಹೀಗೆಲ್ಲ ಅಧಿಕಾರ ಮಾಡಿಲ್ಲ. ಮೋದಿ ಪಿಎಂ ಆಗದ್ದೀನಿ ಎಂದು ನಾಟಕ ಮಾಡುತ್ತಿದ್ದಿಯಾ. ಮೋದಿ ಆಡಳಿತ ಸರಿಯಾಗಿ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮ ತರಹ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಾರ್ಟಿ ಬಿಟ್ಟು ನನ್ನ ಜೊತೆ ಜಗಳಕ್ಕೆ ಬಾ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಮಹಮದ್ ರಸೂಲ್ ವಿರುದ್ಧ ಕೊಲೆ ಬೆದರಿಕೆ, ನಿಂದನೆ ಹಾಗೂ ಸಶಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular