Wednesday, April 23, 2025
Homeಬಂಟ್ವಾಳಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ "ವಿಶ್ವ ಜಲ ದಿನ" ಆಚರಣೆ

ಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ “ವಿಶ್ವ ಜಲ ದಿನ” ಆಚರಣೆ

ಬಂಟ್ವಾಳ : ವಿಶ್ವದ ಪ್ರತಿಷ್ಠಿತ ಸಂಸ್ಥೆಯಾದ ಯೂನಿಸೆಫ್ (UNICEF) ನೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಂಟಿಯಾಗಿ ಕರ್ನಾಟಕ ರಾಜ್ಯದಲ್ಲಿ ‘ನೀರು ಉಳಿಸಿ ‘ಎನ್ನುವ ಬೃಹತ್ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಮುಂದಿನ ಒಂದು ತಿಂಗಳಲ್ಲಿ ಸುಮಾರು 600 ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವನ್ನು ಬಂಟ್ವಾಳ ಮಣಿಹಳ್ಳಒಕ್ಕೂಟ ಅಧ್ಯಕ್ಷರಾದ ಪದ್ಮನಾಭ ಗೌಡರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಉದ್ಘಾಟಿಸಲಾಯಿತು.

ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದರವರು ಮಳೆ ಕೊಯ್ಲು ,ಕೊಳವೆಬಾವಿ ಜಲ ಮರುಪೂರಣ, ತಡೆಗೋಡೆಗಳ ಮೂಲಕ ನೀರು ಸಂಗ್ರಹಣೆ ಹಾಗೂ ನೀರಿನ ಉಳಿವಿಕೆಗಾಗಿ ಸರಕಾರಿ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಈಗಾಗಲೇ ಈ ಕಾರ್ಯಕ್ರಮಕ್ಕೆ ಪೂರಕವಾಗಿ ,”ಕೆರೆ ಸಂಜೀವಿನಿ” ಮತ್ತು “ನಮ್ಮೂರು ನಮ್ಮ ಕೆರೆ” ಯೋಜನೆಯ ಮೂಲಕ ಸುಮಾರು 898 ಕೆರೆಗಳ ಗಳನ್ನು ಅಭಿವೃದ್ಧಿಪಡಿಸಿದ್ದು ಸುಮಾರು 468 ಶುದ್ದಗಂಗಾ ಘಟಕಗಳ ಸ್ಥಾಪನೆಯ ಮೂಲಕ ಶುದ್ಧ ನೀರನ್ನು ನಿರಂತರವಾಗಿ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.

ಸೇವಾ ಪ್ರತಿನಿಧಿ ಉಷಾ ವಂದಿಸಿ. ಕೃಷಿ ಮೇಲ್ವಿಚಾರಕರಾದ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular