Sunday, January 19, 2025
Homeಅಂತಾರಾಷ್ಟ್ರೀಯಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ

ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ

ವಾಷಿಂಗ್ಟನ್‌: ಡೆಮಾಕ್ರಟಿಕ್ ನಾಯಕ, ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ಜಾರ್ಜಿಯಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದಾರೆ.
ಜಿಮ್ಮಿ ಕಾರ್ಟರ್‌ (100) ಅವರು ಮಾನವೀಯ ಕೆಲಸಕ್ಕಾಗಿ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದು, ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯಸ್ಥಿತಿಕೆ ನಡೆಸಿ ಶಾಂತಿ ಮಾತುಕತೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು.
1977ರಿಂದ 1981ರವರೆಗೆ 39ನೇ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಸೇವೆ ಸಲ್ಲಿಸಿದ್ದರು. 1980ರ ಚುನಾವಣೆಯಲ್ಲಿ ನಟ, ರಾಜಕಾರಣಿ ರೊನಾಲ್ಡ್ ರೇಗನ್ ಅವರ ವಿರುದ್ಧ ಸೋತಿದ್ದರು.

ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಕಾರ್ಟರ್‌. ಇವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು. ಜಾಕ್, ಚಿಪ್, ಜೆಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿಮೊಮ್ಮಕ್ಕಳಿದ್ದಾರೆ.

ನನ್ನ ತಂದೆ ನನಗೆ ಮಾತ್ರವಲ್ಲ, ಶಾಂತಿ, ಮಾನವ ಹಕ್ಕುಗಳು ಮತ್ತು ನಿಸ್ವಾರ್ಥ ಪ್ರೀತಿಯನ್ನು ನಂಬುವ ಪ್ರತಿಯೊಬ್ಬರಿಗೂ ಹೀರೋ ಆಗಿದ್ದರು ಎಂದು ಚಿಪ್ ಕಾರ್ಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular