ಕಾಸರಗೋಡಿನಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು 2025ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ವಿಶ್ವವಿದ್ಯಾಲಯದ ಜಾಲತಾಣದ ಮೂಲಕ ಆನ್ ಲೈನ್ ನಲ್ಲಿ ಇದೇ ಫೆಬ್ರವರಿ 01 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕನ್ನಡ ಎಂ.ಎ, ಇತರ ಭಾಷಾ ವಿಷಯಗಳು ಸೇರಿದಂತೆ ಮಾನವಿಕ ಶಾಸ್ತ್ರಗಳು, ವಿಜ್ಞಾನ, ವಾಣಿಜ್ಯ, ಸಮಾಜಕಾರ್ಯ, ಹೀಗೆ ಅನೇಕ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Online ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಲಿದೆ. ಭಾಷಾ ಪ್ರಶ್ನೆಪತ್ರಿಕೆಗಳು ಹೊರತುಪಡಿಸಿ ಉಳಿದ ಎಲ್ಲ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಇರಲಿದೆ.
ಕೋರ್ಸ್ ಗಳು, ಪ್ರವೇಶ ಪರೀಕ್ಷೆ ಮತ್ತಿತರ ವಿವರಗಳಿಗಾಗಿ www.Cukerala.ac.in
www.nta.ac.in ಜಾಲತಾಣಗಳಿಗೆ ಭೇಟಿ ನೀಡಬಹುದು.