ಉಜಿರೆ: ಸೆ.9 ರಂದು ಸೋಮವಾರ ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗ ಮತ್ತು ಸ್ನಾತ್ತಕೋತ್ತರ ಅಧ್ಯಯನ ಹಾಗೂ ಸಂಶೋಧನ ವಿಭಾಗದ ಜಂಟಿ ಆಶ್ರಯದಲ್ಲಿ “ಸಿರಿಧಾನ್ಯಗಳು ಮತ್ತು ಮಾನಸಿಕ ಆರೋಗ್ಯ” ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸ್ನಾತ್ತಕೋತ್ತರ ಅಧ್ಯಯನ ವಿಭಾಗದ ಡೀನ್ ಪ್ರೊ. ವಿಶ್ವನಾಥ ಪಿ. ಮತ್ತು ವಿಚಾರಸಂಕಿರಣದ ಸಂಘಟಕರಾದ ಪ್ರೊ. ವಂದನಾ ಜೈನ್ ಹಾಗೂ ಸಂಘಟನಾ ಕರ‍್ಯರ‍್ಶಿ ಪ್ರೊ. ಸಿಂಧು ವಿ. ತಿಳಿಸಿದ್ದಾರೆ.
ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೋಮವಾರ ಪರ‍್ವಾಹ್ನ ಹತ್ತು ಗಂಟೆಯಿಂದ ನಡೆಯುವ ವಿಚಾರಸಂಕಿರಣದಲ್ಲಿ ಆಹಾರ ಮತ್ತು ಪೌಷ್ಠಿಕಾಂಶ ತಜ್ಞ ಡಾ. ಖಾದರ್ ವಲಿ ಮತ್ತು ಶಿವಮೊಗ್ಗದ ಮಾನಸ ಸಮೂಹಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರೀತಿ ವಿ. ಶಾನ್‌ಭಾಗ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು : ಮೊಬೈಲ್ : 9449728668