ಉಡುಪಿ:ಕರ್ನಾಟಕ ಸರಕಾರ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಜಲಸಾರಿಗೆ ಮಂಡಳಿ ಉಪ ವಿಭಾಗ ಉಡುಪಿ ಇದರ ವತಿಯಿಂದ ಬಿಳ್ಕೋಡುಗೆ ಸಮಾರಂಭ ಬುಧವಾರ ಕಚೇರಿಯ ಸಭಾಂಗಣದಲ್ಲಿ ಜರಗಿತು. ಉಡುಪಿ ಒಳನಾಡು ಜಲಸಾರಿಗೆ ಮಂಡಳಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಜಯರಾಜ್ ಆರ್ ಆಚಾರ್ಯ, ಇದೀಗ ಉಡುಪಿಯಿಂದ ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಉಪ ವಿಭಾಗಕ್ಕೆ ವರ್ಗಾವಣೆ ಗೊಂಡು ಪ್ರಯುಕ್ತ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಬಂದರು ಮತ್ತು ಮೀನುಗಾರಿಕಾ ಉಡುಪಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶೋಭಾ, ಮುಖ್ಯ ಅತಿಥಿಯಾಗಿ ಬಂದರು ಮತ್ತು ಮೀನುಗಾರಿಕಾ ಮಂಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್, ಮಲ್ಪೆ ಮೀನುಗಾರಿಕೆ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಗುತ್ತಿಗೆದಾರ ಸತೀಶ್ ಶೇಟ್ ಜೊತೆಗೂಡಿ ವರ್ಗಾವಣೆಗೊಂಡ ಜಯರಾಜ್ ಆರ್ ಆಚಾರ್ಯರವರಿಗೆ ಶಾಲು ಹೊದಿಸಿ ಫಲ ಪುಷ್ಪ , ಸ್ಮರಣಿಕೆ ನೀಡಿ ಗೌರವಿಸಿದರು.
ಉಡುಪಿ ವಿಭಾಗ ಹಾಗೂ ಉಪ ವಿಭಾಗದ ವತಿಯಿಂದ ಗೌರವ ಅರ್ಪಣೆ ನೆಡೆಯಿತು
. ಸಹಾಯಕ ಇಂಜಿನಿಯರ್ ಭಾನುಪ್ರಕಾಶ್ ಅತ್ತಾವರ್ ,ಕಚೇರಿಯ ಅಧೀಕ್ಷಕ ನಾಗರಾಜ್ ಖಾರ್ವಿ ಉಡುಪಿ ಜಲಸಾರಿಗೆ ಮಂಡಳಿ ಉಪ ವಿಭಾಗ , ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು , ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು , ಇಲಾಖೆಯ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥರಿದ್ದರು, ಕು ನಿಧಿ ಪೈ ಸ್ವಾಗತಿಸಿ , ಕಾರ್ಯಕ್ರಮದ ನಿರೂಪಣೆಗೈದರು