ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಚಂಪಾಷಷ್ಠಿ ಮಹೋತ್ಸವ ಜರಗಿತು.
ಎಡಪದವು ಬ್ರಹ್ಮಶ್ರೀ ಬಿ.ಸುಬ್ರಹ್ಮಣ್ಯ ತಂತ್ರಿಯವರ ಹಿರಿತನದಲ್ಲಿ ವೈದಿಕ ವಿಧಿ ವಿಧಾನಗಳು ನಡೆದವು.ಮುಂಜಾನೆ ಉಷಾ ಕಾಲಪೂಜೆ, ಪಂಚಾಮೃತ ಸಹಿತ ನವ ಕಲಶಾಭಿಷೇಕ, 7.05 ಕ್ಕೆ ಧ್ವಜಾರೋಹಣ, ಬಲಿ 10ಕ್ಕೆ ಮಹಾಪೂಜೆ ಶ್ರೀಮನ್ಮಹಾರಥೋತ್ಸವ ಬಳಿಕ ಮಹಾಅನ್ನಸಂತರ್ಪಣೆ ಜರಗಿತು.ಊರ ಪರವೂರ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಧಾರ್ಮಿಕ ದತ್ತಿ ಇಲಾಖೆಯ ಪರವಾಗಿ ದೇವಳದ ಆಡಳಿತಾಧಿಕಾರಿ,ಮೂಡುಬಿದಿರೆ ತಹಶೀಲ್ದಾರ್ ಪ್ರದೀಪ್ ವಿ. ಕುರ್ಡೇಕರ್, ಶಿರಸ್ತೆದಾರ್ ತಿಲಕ್,ಕಂದಾಯ ನಿರೀಕ್ಷಕ ಮಂಜುನಾಥ್, ವಿ.ಎ. ಅನಿಲ್, ವಿ.ಎ.ಶ್ರೀನಿವಾಸ್, ವಿ.ಎ.ಕಿಶೋರ್.ಕಡಂದಲೆ ಗುತ್ತು ಸುದರ್ಶನ ಶೆಟ್ಟಿ, ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕಡಂದಲೆ ಪರಾರಿ ಸುಚರಿತ ಶೆಟ್ಟಿ, ಕಡಂದಲೆ ಪರಾರಿ ಸಂತೋಷ್ ಶೆಟ್ಟಿ ಸಹಿತ ಪ್ರಮುಖರಿದ್ದರು.
ಸಂಜೆ ಸಾರ್ವಜನಿಕ ಆಶ್ಲೇಷಾ ಬಲಿ, ಕಾಪು ರಂಗ ತರಂಗ ತಂಡದವರಿಂದ ಕುಟ್ಟಣ್ಣನ ಕುಟುಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಇಂದು ರಾತ್ರಿ 10:00 ಕ್ಕೆ ಪಿಂಗಾರ ಕಲಾವಿದೆರ್ ಬೆದ್ರ. ‘ರಂಗ ಭೂಷಣ’ಮಣಿ ಕೋಟೆಬಾಗಿಲು ರಚಿಸಿ, ನಟಿಸಿ, ನಿರ್ದೇಶಿಸಿರುವ ತುಳು ನಾಟಕ 72ನೇ ಪ್ರದರ್ಶನ ‘ಕದಂಬ’ನಡೆಯಲಿದೆ.
ವರದಿ: ಜಗದೀಶ್ ಪೂಜಾರಿ ಕಡಂದಲೆ