ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ವಿ. ಕೆ. ಎಂ. ಕಲಾವಿದರು (ರಿ ),ಬೆಂಗಳೂರು ಸಹಯೋಗದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಇದರ ಸಹಕಾರದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನದ ವೇದಿಕೆಯಲ್ಲಿ ಕೇರಳ, ಕರ್ನಾಟಕ,ಮಹಾರಾಷ್ಟ್ರ ರಾಜ್ಯದ 15 ಮಂದಿ ಸಾಧಕರಿಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ “ಚಂದ್ರಗಿರಿ ಮಹಾಜನ ಪ್ರಶಸ್ತಿ 2025” ಪ್ರದಾನ ಸಮಾರಂಭವನ್ನು ಏರ್ಪಡಿಸಲಾಯಿತು.
ಡಾ. ಕೆ. ಸಿ. ಬಲ್ಲಾಳ್ ಅಧ್ಯಕ್ಷರು, ದಕ್ಷಿಣ ಕನ್ನಡಿಗರ ಸಂಘ(ರಿ ),ಬೆಂಗಳೂರು,
ದಯಾಸಾಗರ ಚೌಟ ಮುಂಬಯಿ, ಅಶೋಕ ಜಿ. ಮಳಗಲಿ ಬೆಳಗಾವಿ, ಆನಂದ ಪುರಾಣಿಕ ಬೆಳಗಾವಿ, ಚಂದ್ರಶೇಖರ ನವಲಗುಂದ ಬೆಳಗಾವಿ, ಅಪ್ಪಾಸಾಹೇಬ ಅಲಿಬಾದಿ ಅಥಣಿ ಬೆಳಗಾವಿ, ರವಿ ಎಸ್. ಸಿ. ಕೋಟಾರಗಸ್ತಿ ಬೆಳಗಾವಿ, ಗಣೇಶ ಪ್ರಸಾದ ಪಾಂಡೇಲು ವಿಟ್ಲ, ವಿಷ್ಣು ಗುಪ್ತ ಪುಣಚ, ವಿಟ್ಲ,ಆನಂದ ರೈ ಅಡ್ಕಸ್ಥಳ ಕಾಸರಗೋಡು,ಸಿ. ಎಚ್.ಸುರೇಶ ಚಂದ್ರಗಿರಿ, ಬಾಬು ಪೂಜಾರಿ ಮೊಕ್ತೇಸರರು ಕೊರಗಜ್ಜ ಸನ್ನಿಧಿ,ಜೆ.ಪಿ.ನಗರ ಕಾಸರಗೋಡು,
ಗಾಯಕರಾದ- ಜಯಾನಂದ ಕುಮಾರ್ ಕಾಸರಗೋಡು,ವಸಂತ ಬಾರಡ್ಕ ಕಾಸರಗೋಡು, ರತ್ನಾಕರ ಎಸ್. ಒಡಂಗಲ್ಲು ಕಾಸರಗೋಡು, ಅವರಿಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಅಖಿಲ ಭಾರತ ಮಟ್ಟದ ವ್ಯಾಪ್ತಿಯಲ್ಲಿ ಸ್ಥಾಪಿಸಿದ ಪ್ರಪ್ರಥಮ “ಪ್ರತಿಷ್ಠಿತ ಚಂದ್ರಗಿರಿ ಮಹಾಜನ ಪ್ರಶಸ್ತಿ- 2025 “ನ್ನು ರಾಜ್ಯದ 15 ಮಂದಿ ಸಾಧಕರಿಗೆ ನೀಡಿ ಗೌರವಿಸಲಾಯಿತು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ “ಚಂದ್ರಗಿರಿ ಮಹಾಜನ ಪ್ರಶಸ್ತಿ”ಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ,ಸ್ಮರಣೆಕೆ,ರೇಷ್ಮೆ ಶಾಲು, ಹಾರ ಮತ್ತು ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವರ ಭಾವಚಿತ್ರವನ್ನು ನೀಡಿ ಗುರುಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯದಂತೆ ಗೌರವಿಸಲಾಯಿತು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಚಂದ್ರಗಿರಿ ಮಹಾಜನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕಾಸರಗೋಡು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ, ಮೈಸೂರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಕೌಸ್ತುಭ ಮಾಸಪತ್ರಿಕೆ, ಸಂಪಾದಕಿ ಡಾ. ರತ್ನಾ ಹಾಲಪ್ಪ ಗೌಡ ಮೈಸೂರು, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್. ಎಸ್. ಶಾಸ್ತ್ರಿ, ವಿ. ಕೆ. ಎಂ. ಕಲಾವಿದರು(ರಿ), ಬೆಂಗಳೂರು ಪ್ರಧಾನ ಕಾರ್ಯದರ್ಶಿ ಸಿ. ಎಂ. ತಿಮ್ಮಯ್ಯ, ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಹರೀಶ ಸುಲಾಯ ಒಡ್ಡoಬೆಟ್ಟು, ಮಂಜೇಶ್ವರ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ(ರಿ ),ಪ್ರಧಾನ ಕಾರ್ಯದರ್ಶಿ ಜಯರಾಜ ಶೆಟ್ಟಿ ಚಾರ್ಲ, ಶ್ರೀ ಕೃಷ್ಣಯ್ಯ ಅನಂತಪುರ,ಕಾಸರಗೋಡು ನಗರಸಭಾ ಕೌನ್ಸಿಲರ್ ಬಿ. ಶಾರದಾ,ಕೌನ್ಸಿಲರ್ ಕೆ.ವರಪ್ರಸಾದ ಕೋಟೆಕಣೆ, ಮಾಜಿ ಕೌನ್ಸಿಲರ್ ಶಂಕರ ಕೆ.ಜೆ.ಪಿ.ನಗರ, ರಾಧಾ ಕೃಷ್ಣ ಕೆ. ಉಳಿಯತ್ತಡ್ಕ,ಕೆ.ಎನ್ ವೆಂಕಟ್ರಮಣ ಹೊಳ್ಳ , ಕಾಸರಗೋಡು, ಆಯಿಷಾ ಏ. ಏ. ಪೆರ್ಲ, ಕೆ.ಗುರುಪ್ರಸಾದ ಕೋಟೆಕಣಿ, ಕೆ.ಜಗದೀಶ ಕೂಡ್ಲು,ದಿವಾಕರ ಪಿ. ಅಶೋಕನಗರ,ಶ್ರೀಕಾಂತ ಕಾಸರಗೋಡು, ಜಯ
ಮಣಿಯoಪಾರೆ, ಎಸ್. ಎಲ್. ಭಾರದ್ವಾಜ್ ಬೇಕಲ್, ಕೆ. ಸುಬ್ಬಣ್ಣ ಶೆಟ್ಟಿ ಕೂಡ್ಲು, ಕುಶಲ ಕುಮಾರ ಕೆ. ಕನ್ನಡ ಗ್ರಾಮ,ವೀರಭದ್ರೇ ಗೌಡ ಅಂದಲೆ ಮೈಸೂರು, ಮಹೇಶ್ ಆರ್. ನಾಯಕ್ ಮಂಗಳೂರು, ಸೋಮು ಎಚ್ ಹಿಪ್ಪರಗಿ, ಸಂಶೋಧನಾರ್ಥಿ – ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ – ಪೆರಿಯ, ಕಾಸರಗೋಡು. ವಿಶ್ವರಂಗಭೂಮಿ ಪ್ರಶಸ್ತಿ ಪುರಸ್ಕೃತರಾದ ಡಿ. ವೆಂಕಟರಮಣಯ್ಯ (ಅಪ್ಪಾಜಿ), ಕೆ.ಲಕ್ಷ್ಮಣ ಸುವರ್ಣ, ಕಲ್ಯಾಣಿ ಪ್ರದೀಪ್ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಜ್ಯದ ಸಾಧಕರಿಗೆ “ಚಂದ್ರಗಿರಿ ಮಹಾಜನ ಪ್ರಶಸ್ತಿ- 2025 “ಪ್ರದಾನ
RELATED ARTICLES