Wednesday, February 19, 2025
Homeಮಂಗಳೂರುಹೊಯ್ಸಳರ ರಾಣಿ , ಆಳುಪರ ಚಕ್ರವತಿ೯ ಚಿಕ್ಕಾಯಿತಾಯಿ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

ಹೊಯ್ಸಳರ ರಾಣಿ , ಆಳುಪರ ಚಕ್ರವತಿ೯ ಚಿಕ್ಕಾಯಿತಾಯಿ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

ನೂತನ ಚಾರಿಟೇಬಲ್ ಟ್ರಸ್ಟ ಅಸ್ತಿತ್ವ ಹೊಯ್ಸಳರ ರಾಣಿ , ಆಳುಪರ ಚಕ್ರವತಿ೯ ಚಿಕ್ಕಾಯಿತಾಯಿ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ ರಾಣಿ ಚಿಕ್ಕಾಯಿತಾಯಿ ಚಾರಿಟೇಬಲ್ ಟ್ರಸ್ಟ್ ಗುಳ್ಳಾಡಿ ಸಂಸ್ಥೆ ಸರಕಾರದಿಂದ ಅಧಿಕೃತವಾಗಿ ನೊಂದಣಿಗೊಂಡಿದೆ. ಗುಳ್ಳಾಡಿಯ ಹೊಸಿಮನೆ ಕುಟುಂಬದ ಡಾ.ರಘುರಾಮ ಶೆಟ್ಟಿ ಗುಳ್ಳಾಡಿ ಹಾಗೂ ಸ ಮನಸ್ಕರ ತಂಡ ಸಾಮಾಜಿಕ ಸೇವೆ ,ಶೈಕ್ಷಣಿಕ ಸೇವೆಗಾಗಿ ಸಾವ೯ಜನಿಕ ಸಂಸ್ಥೆಯನ್ನು ಪ್ರಾರಂಭಿಸಲು ಸಭೆ ಕರೆಯಲಾಗಿದ್ದು,ಅದರಂತೆ ಸರಕಾರದಿಂದ ನೊಂದಾವಣಿ ಹಾಗೂ ಮುದ್ರಣಾಲಯದಿಂದ ಅನುಮತಿ ಪಡೆದ ವಿಚಾರವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ರಘುರಾಮ ಶೆಟ್ಟಿ ಗುಳ್ಳಾಡಿಯವರು ಮಾಧ್ಯಮಕ್ಕೆ ಈ ಮೂಲಕ ತಿಳಿಸಿದರು.

ಟ್ರಸ್ಟಿಯಾಗಿ ಡಾ.ಅಶೋಕ ಕುಮಾರ್ ಶೆಟ್ಟಿ ಹಾಗೂ ಡಾ.ಚಿತ್ತರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದರು. ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳು ಉಪಯೋಗವಾಗುವಂತೆ ಸಾವ೯ಜನಿಕ ವಲಯದಲ್ಲಿ ಕೆಲಸ ಮಾಡುವ ಯೋಜನೆಗಳನ್ನು ಮಾಡುವಲ್ಲಿ ಈ ಸಂಸ್ಥೆ ಮಾದರಿಯಾಗಿ ಹೊರ ಹೊಮ್ಮಲಿದೆ ಎಂದು ಟ್ರಸ್ಟ್ ನ ಸದಸ್ಯರು ತಿಳಿಸಿರುತ್ತಾರೆ. ಕೆರೆಗಳ ಸ್ವಚ್ಚತೆ, ಪುರಾತತ್ವ ಸಂಶೋಧನೆಗೆ ಸಹಕಾರಿಯಾಗುವಂತೆ ಅಧ್ಯಯನ ,ಕೋಟೆಗಳ ಅಧ್ಯಯನ ,ಇತಿಹಾಸದ ವಿಚಾರವನ್ನು ಸಾವ೯ಜನಿಕ ರಿಗೆ ಅರಿವು ಮೂಡಿಸುವ ಕಾಯ೯ ನಮ್ಮ ಮುಖ್ಯ ಉದ್ದೇಶವಾಗಿದ್ದು,ಇಂದು ಸರಕಾರದಿಂದ ನೊಂದಾವಣಿ ಗೊಂಡಿದ್ದು ಸದ್ಯದಲ್ಲೇ ಚಾಲನೆ ನೀಡಲಿದ್ದೇವೆ.

RELATED ARTICLES
- Advertisment -
Google search engine

Most Popular