ಸುರತ್ಕಲ್ : ಪ್ರತಿಯೊಬ್ಬರ ಬದುಕಿನಲ್ಲಿ ಚೈತನ್ಯವನ್ನು ತರಿಸುವ ಹೊಸ ಹೊಸ ಅಲೋಚನೆಗಳನ್ನು ಬೆಳೆಸುವ ಅವಿಭಾಜ್ಯ ಅಂಗವೆ ಕ್ರೀಡೆ ಎಂದು ಕೆ.ಪಿ,ಸಿ,ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನುಡಿದರು. ಅವರು ಚೇಳೈರು ಪ್ರೇಂಡ್ಸ್ ವತಿಯಿಂದ ಚೇಳೈರುಗುತ್ತು ಅಗೋಳಿಮಂಜಣ್ಣ ಗದ್ದೆಯಲ್ಲಿ ನಡೆದ ಚೇಳೈರು ಪ್ರಿಮಿಯರ್ ಲೀಗ್ 2025 ಎರಡು ದಿನದ ಕ್ರಿಕೆಟ್ ಪಂದ್ಯಾಟದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು ಚೇಳೈರು ಪ್ರೇಂಡ್ಸ್ ಕೇವಲ ಕ್ರೀಡೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರಲ್ಲದೆ ಈ ಸಂಘ ಇತರರಿಗೆ ಮಾದರಿಯಾಗಲಿ ಎಂದರು .
ವೇದಿಕೆಯಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಉದ್ಯಮಿ ಸತೀಶ್ ಮುಂಚೂರು,ವೇಣು ವಿನೋದ್ ಶೆಟ್ಟಿ ಚೇಳೈರು, ಗುತ್ತಿಗೆದಾರರಾದ ಶ್ರೀನಿವಾಸ್ ಅಮೀನ್ ಚೇಳೈರು, ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಚೇಳೈರು ದುರ್ಗಾ ಪ್ರೇಂಡ್ಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಾಗೇಶ್ ಖಂಡಿಗೆ,ಸತೀಶ್ ಅಂಚನ್,ಸುಯೋಗ ಇಂಜಿನಿಯರಿಂಗ್ ದಿನೇಶ್ ಕುಮಾರ್,ವೆಂಕಟೇಶ ಶೆಟ್ಟಿ ನಾಗಲೆಕ್ಕಾರ್,ಅವಿನಾಶ್ ಶೆಟ್ಟಿ ಕೆರೆಮನೆ,ಕಿರಣ್ ಶೆಟ್ಟಿ ಕೆರೆಮನೆ,ವಿಖ್ಯಾತ್ ಶೆಟ್ಟಿ ಮಧ್ಯ,ದಿವಾಕರ ಸಾಮಾನಿ ಚೇಳೈರುಗುತ್ತು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಭಟ್ ಕುಕ್ಕುಳಿ,ಚೇಳೈರು ಗ್ರಾಮ ಪಂಚಾಯತ್ ಸದಸ್ಯ ಚರಣ್ ಕುಮಾರ್ ಶೆಟ್ಟಿ,ಮನೋಜ್ ಶೆಟ್ಟಿ ಚೇಳೈರು ಮುಂತಾದವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ವಿದ್ಯಾ,ಕೇಸರಿ,ಶಶಿಕಲಾ, ಪಾರ್ವತಿ ಇವರನ್ನು ಅಭಿನಂದಿಸಲಾಯಿತು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವೈದ್ಯಕೀಯ ವೆಚ್ಚಕ್ಕೆ ಸಹಾಯಧನ ವಿತರಿಸಲಾಯಿತು ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಪಂಜ ಪ್ರೇಂಡ್ಸ್ ದ್ವೀತಿಯ ಟಿಂ ಸ್ಪಾರ್ಕ್ ಚೇಳೈರು ವಿಜೇತರಾದರು.