Friday, March 21, 2025
Homeಸುರತ್ಕಲ್ಚೇಳಾರ್: ಒಳಚರಂಡಿಯ ಕೊಳಚೆ ನೀರು ನಂದಿನಿ ನದಿಗೆ ಗ್ರಾಮಸ್ಥರು ಹೋರಾಟಕ್ಕೆ ಸಿದ್ದತೆಮಾಚ್೯ 4 ರಂದು ಬೃಹತ್...

ಚೇಳಾರ್: ಒಳಚರಂಡಿಯ ಕೊಳಚೆ ನೀರು ನಂದಿನಿ ನದಿಗೆ ಗ್ರಾಮಸ್ಥರು ಹೋರಾಟಕ್ಕೆ ಸಿದ್ದತೆ
ಮಾಚ್೯ 4 ರಂದು ಬೃಹತ್ ಪ್ರತಿಭಟನೆ

ಸುರತ್ಕಲ್: ಇತಿಹಾಸ ಪ್ರಸಿದ್ದ ಚೇಳೈರು ಖಂಡಿಗೆ ನಂದಿನಿ ನದಿಗೆ ಮುಂಚೂರು ವೆಟ್ ವೆಲ್ ನ ಹತ್ತಿರದ ಒಳಚರಂಡಿಯ ಕೊಳಚೆ ನೀರು ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಅಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೇಲ್ ಗಳ ತ್ಯಾಜ್ಯ ನೀರುಗಳನ್ನು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು.

ಇದರಿಂದಾಗಿ ಚೇಳೈರು ಖಂಡಿಗೆ ಭಾಗದ ಅನೇಕ ಕೃಷಿಯನ್ನೆ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು , ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲೀನಗೊಂಡಿದೆ ಮಾತ್ರವಲ್ಲದೆ ಇತಿಹಾಸ ಪ್ರಸಿದ್ದ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ. ಜಾನುವಾರುಗಳಿಗೆ ನೀರು ಕುಡಿಯಲು ಮತ್ತು ಮೇವು ತಿನ್ನದ ಹೀನಾಯ ಪರಿಸ್ಥಿತಿ ಎದುರಾಗಿದ್ದು ಬಾವಿಯ ನೀರು ಕುಡಿದ ಅನೇಕ ಜನರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿದ್ದು ಖೇದಕರ ವಿಷಯವಾಗಿದೆ ಈ ಬಗ್ಗೆ ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳೈರು ಮೂಲಕ ಜಿಲ್ಲೆಯ ಸಂಸದರು, ಕ್ಷೇತ್ರದ ಶಾಸಕರಿಗೆ , ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಗೆ , ಜಿಲ್ಲಾಧಿಕಾರಿಗೆ, ನಗರ ಪಾಲಿಕೆ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ತುಂಬಾ ಸಮಯದಿಂದ ಮನವಿ ನೀಡುತ್ತಾ ಬಂದರು.

ಕಿಂಚಿತ್ತು ಬೆಲೆ ಇಲ್ಲದಂತಾಗಿತ್ತು. ಇದರಿಂದ ಅಕ್ರೋಶಗೊಂಡ ಸಂರಕ್ಷಣಾ ಸಮಿತಿ ಮತ್ತು ಗ್ರಾಮಸ್ಥರು ಇಂದು ಚೇಳೈರು ಖಂಡಿಗೆ ದೈವಸ್ಥಾನದ ವಠಾರದಲ್ಲಿ ಗ್ರಾಮಸ್ಥರಿಗೆ ಅಗುತ್ತಿರುವ ಅನ್ಯಾಯದ ಬಗ್ಗೆ ಬೃಹತ್ ಹೋರಾಟ ನಡೆಸುವ ಪೂರ್ವಭಾವಿ ಸಭೆಯನ್ನು ಎರ್ಪಡಿಸಲಾಯಿತು‌. ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ ನಂದಿನಿ ನದಿ ಕಲುಷಿತಗೊಂಡ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಸಂರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ,ನಗರ ಪಾಲಿಕೆ, ಪರಿಸರ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ .

ಸರಿಪಡಿಸುವ ಭರವಸೆ ನೀಡಿದ್ದಾರೆ. ಸರಿಪಡಿಸಿಲ್ಲ ಅದ್ದರಿಂದ ಈ ಸಮಸ್ಯಗೆ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯ ವೈಪಲ್ಯ ನೇರ ಕಾರಣವೆಂದರು ಇದಕ್ಕೆ ನಾವು ಜನಾಂದೋಲನ ಮತ್ತು ಕಾನೂನು ಹೋರಾಟದ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸುವ ಅಗತ್ಯವಿದೆ. ಎಂದರು ದಿವಾಕರ ಸಾಮಾನಿ ಚೇಳೈರುಗುತ್ತು ಮಾತನಾಡಿ ಬರುವ ಮಾರ್ಚ್ 4 ನೇ ತಾರೀಖಿನಂದು ಬೆಳಿಗ್ಗೆ 10-00 ಗಂಟೆಗೆ ನಂದಿನಿ ಮಿತ್ರ ಮಂಡಳಿ ಚೇಳೈರು ಇಲ್ಲಿ ಎಲ್ಲಾ ಗ್ರಾಮಸ್ಥರು ಒಟ್ಟು ಸೇರಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು.

ಎಲ್ಲರ ಸಹಕಾರ ಅಗತ್ಯ ಎಂದರು. ಸುಕೇಶ್ ಶೆಟ್ಟಿ ಖಂಡಿಗೆ ಮಾತನಾಡಿ ಎಸ್ ಟಿ ಪಿ ಪ್ಲಾಂಟ್ ಕಾನೂನು ರೀತಿ ಚಾಲನೆಗೆ ಅನುಮತಿ ಇಲ್ಲ ಸರಕಾರದ ಅನುಮತಿ ಇಲ್ಲದೆ ಪ್ಲಾಂಟ್ ತ್ಯಾಜ್ಯ ನೀರು ಬಿಡುವವುದನ್ನು ತಕ್ಷಣ ಜಿಲ್ಲಾಡಳಿತ ನಿಲ್ಲಿಸಬೇಕು ಎಂದರು ಸಭೆಯಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ಅಸ್ಪತ್ರೆ,ಹೋಟೆಲ್, ಎಸ್ ಟಿ ಪಿ ಪ್ಲಾಂಟ್ , ಒಳಚರಂಡಿ ಕೊಳಚೆ ನೀರು ವೆಟ್ ವೆಲ್ ನ ನೀರು ಮತ್ತು ಮನೆಯ ತ್ಯಾಜ್ಯ ನೀರು ನಂದಿನಿ ನದಿಗೆ ಬರಬಾರದು ಯಾವುದೇ ರಾಜಕೀಯ ರಹಿತ ಹೋರಾಟ ನಡೆಸಲು ನಿರ್ಣಯಿಸಲಾಯಿತು.

ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಸತೀಶ್ ಮುಂಚೂರು,ಚಿತ್ತರಂಜನ್ ಭಂಡಾರಿ, ಉದಯಕುಮಾರ್ ಶೆಟ್ಟಿ ತೋಕೂರುಗುತ್ತು, ವಕೀಲರಾದ ರವೀಂದ್ರನಾಥ್ ಶೆಟ್ಟಿ, ದಯಾನಂದ ಶೆಟ್ಟಿ ಖಂಡಿಗೆ , ಸುಧಾಕರ ಶೆಟ್ಟಿ ಖಂಡಿಗೆ, ವೀಣಾ ಟಿ ಶೆಟ್ಟಿ ಚೇಳೈರುಗುತ್ತು, ಪುಷ್ಪರಾಜ್ ಶೆಟ್ಟಿ ಮಧ್ಯ, ಪ್ರತಿಮಾ ಶೆಟ್ಟಿ ಮಧ್ಯ, ರಮೇಶ್ ಪೂಜಾರಿ ಚೇಳೈರು, ಬಾಲಕೃಷ್ಣ ಶೆಟ್ಟಿ ಚೇಳೈರು, ಸುರೇಶ್ ಶೆಟ್ಟಿ ಕಾಲನಿ, ಪ್ರಮೋದ್ ಶೆಟ್ಟಿ ಸುರತ್ಕಲ್, ಕಿರಣ್ ಶೆಟ್ಟಿ ಕೆರೆಮನೆ, ಲಕ್ಷ್ಮಣ ಪೂಜಾರಿ, ಮೋಹನ್ ಚೇಳೈರು, ಮುದ್ದು ಸುವರ್ಣ, ಚರಣ್ ಕುಮಾರ್ , ನಾಗೇಶ್ ಖಂಡಿಗೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular