ಉಡುಪಿ: ಚೇತನ್ ಲಯನ್ಸ್ ಕ್ಲಬ್ ಉಡುಪಿ ಸಂಸ್ಥೆಗೆ ಏ. 9ರಂದು ಉಡುಪಿ ಪಂಚರತ್ನ ಹೋಟೆಲ್ ನಲ್ಲಿ ಸಮಾರಂಭ ನೆಡೆಯಿತು. ಈ ಸಂದರ್ಭದಲ್ಲಿ ರಾಜ್ಯಪಾಲರ ಅಧಿಕೃತ ಭೇಟಿ ನೀಡಿ ಸಂಸ್ಥೆಯು ಈ ಬಾರಿ ನೆಡೆಸಿದ ವಿವಿಧ ಸಾಮಾಜಿಕ ಚಟುವಟಿಕೆಯನ್ನು ವಿಶಿಷ್ಠ ಸಾಧನೆ ಗುರುತಿಸಿ ಅಧ್ಯಕ್ಷರಾದ ಜಗದೀಶ್ ಅಚಾರ್ಯರವರಿಗೆ ಲಯನ್ ಅವಾರ್ಡ್ ನ್ನು ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೋ ನೀಡಿ ಗೌರವಿಸಿದರು. ಲಯನ್ಸ್ ಕ್ಲಬ್ ವತಿಯಿಂದ ಸೇವಾಕಾರ್ಯಅಂಗವಾಗಿ ಗ್ರಹ ನಿರ್ಮಾಣಕ್ಕೆ ಆರ್ಥಿಕ ಸಹಾಯ, ಅನಾರೋಗ್ಯದ ಪೀಡಿತರಿಗೆ ಧನ ಸಹಾಯ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೋ ದಂಪತಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಪ್ನಾ ಸುರೇಶ, ಅರುಣ್ ಕುಮಾರ್ ಶೆಟ್ಟಿ , ವರ್ವಾಡಿ ಪ್ರಸಾದ್ ಶೆಟ್ಟಿ , ರಾಜೀವ್ ಕೋಟ್ಯಾನ್, ಪುಷ್ಪರಾಜ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ರಾಜೇಶ್ ಶೆಟ್ಟಿ ಅತ್ರಾಡಿ ಹಾಗೂ ಸಂಸ್ಥೆಯ ಪಧಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.