ಮಂಗಳೂರು: ನಗರದ ಓಷನ್ ಪರ್ಲ್ ಹೋಟೆಲ್‌ನ ಕೋರಲ್ ಮಲ್ಟಿ ಕ್ಯುಸೈನ್ ಫೈನ್ ಡೈನ್ ರೆಸ್ಟೋರೆಂಟ್‌ನಲ್ಲಿ ಜೂನ್ 15ರಿಂದ 24ರವರೆಗೆ ಪ್ರಸಿದ್ಧ ಚೆಟ್ಟಿನಾಡ್ ಆಹಾರೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ನಾಲಗೆಯಲ್ಲಿ ನೀರೂರಿಸುವ ಖಾದ್ಯಗಳನ್ನು ಸವಿಯುವ ಅವಕಾಶ ಮಂಗಳೂರಿಗರಿಗೆ ಸಿಕ್ಕಿದೆ.
ವಿಶ್ವದಾದ್ಯಂತ ಇರುವ ವಿವಿಧ ಬಗೆಯ ಖಾದ್ಯಗಳ ಸ್ವಾದವನ್ನು ಮಂಗಳೂರಿಗರಿಗೆ ತಲುಪಿಸುವಲ್ಲಿ ಓಷನ್ ಪರ್ಲ್ ಹೋಟೆಲ್‌ಪ್ರಸಿದ್ಧವಾಗಿದೆ. ಈ ವಾರಕ್ಕಾಗಿ ಚೆಟ್ಟಿನಾಡ್ ಶೈಲಿಯ ಆಹಾರ ಖಾದ್ಯಗಳನ್ನು ಪರಿಚಯಿಸುತ್ತಿದ್ದು, ಖಾದ್ಯ ಪ್ರಿಯರ ಬಾಯಲ್ಲಿ ನೀರೂರಿಸಲು ಎಲ್ಲ ಸಿದ್ಧತೆ ನಡೆಸಿದೆ.
ಈ ಆಹಾರೋತ್ಸವದ ವಿಶೇಷತೆಗಳು ಹೀಗಿವೆ:
ಚೆಟ್ಟಿನಾಡು ಬಿರಿಯಾನಿ: ಸುವಾಸನೆಯ ಅಕ್ಕಿ ಮತ್ತು ವಿಶೇಷ ಮಸಾಲೆಗಳ ಸಮ್ಮಿಶ್ರಣ ಹೊಂದಿದ್ದು, ಚೆಟ್ಟಿನಾಡ್‌ನ ಸಾರವನ್ನು ಒಳಗೊಂಡಿದೆ.
ಚೆಟ್ಟಿನಾಡ್ ಚಿಕನ್ ಸುಕ್ಕ: ರಸಭರಿತವಾದ ಚಿಕನ್, ಸಾಂಪ್ರದಾಯಿಕ ಮಸಾಲೆಗಳ ಮಿಶ್ರಣದೊಂದಿಗೆ ಕುಶಲತೆಯಿಂದ ತುಂಬಿಸಿ, ಪರಿಪೂರ್ಣತೆಗಾಗಿ ಬೇಯಿಸಲಾಗುತ್ತದೆ.
ಮೀನ್ ಪೊಲ್ಲಿಚಾತು: ಬಾಳೆ ಎಲೆಯಲ್ಲಿ ಹೊದಿಸಿ ಪರಿಣಾಮಕಾರಿಯಾಗಿ ಗ್ರಿಲ್ ಮಾಡಿದ ಮೀನಿನ ರುಚಿಕರ ಭಕ್ಷ್ಯ.
ಮೀನು ಚೆಟ್ಟಿನಾಡ್ ಗ್ರೇವಿ: ಚೆಟ್ಟಿನಾಡ್ ಪಾಕಶೈಲಿಯ ಖಾರದ ಮೀನು ಸಾರು. ಇದು ಅದ್ಭುತ ಸ್ವಾದ ನೀಡುವ ರುಚಿಗಳನ್ನು ಹೊಂದಿದೆ.
ಮಟನ್ ಗ್ರೇವಿ ಚೆಟ್ಟಿನಾಡ್ ಚಾಪ್ಸ್: ರುಚಿಕರವಾದ ಈ ಗ್ರೇವಿಯಲ್ಲಿ ನೆನೆಸಿರುವ ಮಟನ್ ಚಾಪ್ಸ್, ವಿಶಿಷ್ಟ ರುಚಿಗಳಿಂದ ತುಂಬಿರುತ್ತದೆ. ಆಹಾರ ಉತ್ಸವದಲ್ಲಿ ಮಧ್ಯಾಹ್ನದ ಊಟ 12 ರಿಂದ 3 ಗಂಟೆಯವರೆಗೆ, ಸಂಜೆ 7 ರಿಂದ 10 ಗಂಟೆಯವರೆಗೆ ರುಚಿಕರ ರಾತ್ರಿಯ ಊಟದ ಸೇವೆ ಇದೆ. ಅದ್ಭುತ ರುಚಿಗಳಾಚೆಗೆ, ಕೋರಲ್ ಮಲ್ಟಿ ಕೂಸೀನ್ ರೆಸ್ಟೋರೆಂಟ್‌ನ ಆರ್ಕಷಕ ವಾತಾವರಣವು ಅತಿಥಿಗಳನ್ನು ಚೆಟ್ಟಿನಾಡ್‌ನ ಹೃದಯಭಾಗಕ್ಕೆ ಕರೆದೊಯ್ಯುತ್ತದೆ. ಇದು ಮೋಡಿ ಮಾಡುವ ಆಹಾರ ಅನುಭವವನ್ನು ನೀಡುತ್ತದೆ. ಪ್ರತಿ ವಾರ ವಿಶಿಷ್ಟ ಮತ್ತು ಐಷಾರಾಮಿ ಊಟದ ಅನುಭವವನ್ನು ಓಷನ್ ಪರ್ಲ್ ನೀಡುತ್ತಾ ಬಂದಿದೆ. ಈ ವಾರ, ಚೆಟ್ಟಿನಾಡ್ ಪಾಕಶೈಲಿಯ ಸಮೃದ್ಧ ಮತ್ತು ಖಾರದ ಪರಂಪರೆಯ ಮೇಲೆ ಪ್ರಾಶಸ್ತ್ಯ ನೀಡಲಾಗಿದ್ದು, ಗ್ರಾಹಕರ ನಿರೀಕ್ಷೆಗಳನ್ನು ಮೀರಿಸುವ ಭರವಸೆಯನ್ನು ಓಷನ್ ಪರ್ಲ್ ನೀಡುತ್ತದೆ. ಈ ಉತ್ತಮ ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಮಂಗಳೂರಿನ ಖಾದ್ಯ ಪ್ರಿಯರಿಗೆ ಇದು ಸುವರ್ಣಾವಕಾಶವಾಗಿದ್ದು ತುಂಬು ಹೃದಯದಿಂದ ಎಲ್ಲರನ್ನೂ ಸ್ವಾಗತಿಸುತ್ತಿದ್ದೇವೆ.
ಓಷನ್ ಪರ್ಲ್ ಹೋಟೆಲ್ ಕುರಿತು:ಮಂಗಳೂರಿನ ಓಶನ್ ಪರ್ಲ್ ಹೋಟೆಲ್ ಐಷಾರಾಮಿ, ಆಧುನಿಕ ಮತ್ತು ಅತ್ಯುತ್ತಮ ಆರಾಮದಾಯಕ ಸೌಲಭ್ಯಗಳನ್ನು ಒಳಗೊಂಡಿದೆ. ಅತ್ಯದ್ಭುತ ನೋಟಗಳ ವಿಶಿಷ್ಟ ಸಂಯೋಜನೆಯೊಂದಿಗೆ ವಿಶಾಲವಾದ ಸ್ಥಳಾವಕಾಶಗಳು ಮತ್ತು ಸೌಲಭ್ಯಗಳು, ಉತ್ಕೃಷ್ಟ ಸೇವೆ ಮತ್ತು ಕರಾವಳಿ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚು ಆನಂದಿಸುವ ಭರವಸೆಯನ್ನು ಹೋಟೆಲ್ ನೀಡುತ್ತದೆ.
ಕೋರಲ್ ಮಲ್ಟಿ ಕ್ಯುಸೈನ್ ಫೈನ್ ಡೈನ್ ರೆಸ್ಟೋರೆಂಟ್: ಓಷನ್ ಪರ್ಲ್‌ನ ಕೋರಲ್ ಮಲ್ಟಿ ಕ್ಯುಸೈನ್ ಫೈನ್ ಡೈನ್ ರೆಸ್ಟೋರೆಂಟ್ ಖಾದ್ಯ ಪ್ರಿಯರಿಗೆ ಸ್ವರ್ಗದಂತಿದ್ದು, ವಿಶ್ವದಾದ್ಯಂತ ಸಿಗುವ ಖಾದ್ಯಗಳ ಸವಿಯನ್ನು ಪಡೆಯುವ ಅವಕಾಶ ನೀಡುತ್ತದೆ. ಇಲ್ಲಿನ ಅದ್ಭುತ ವಾತಾವರಣ, ಖಾದ್ಯ ಪರಂಪರೆ, ಶೈಲಿ ಹಿಂದೆಂದೂ ಸಿಕ್ಕಿರದ ಅನುಭವವನ್ನು ನೀಡುತ್ತದೆ.