ಶ್ರೀ ಕ್ಷೇತ್ರ ದ ದೃಢ ಕಲಶ ದ ಪ್ರಯುಕ್ತ ಶ್ರೀ ಕ್ಷೇತ್ರ ನೆಲ್ಲಿಯಲ್ಲಿ ಮಾರ್ಚ್ 19 ಬುಧವಾರ ಛತ್ರಪತಿ ಶಿವಾಜಿ ಎಂಬ ನಾಟಕ ಪ್ರದರ್ಶನ ಗೊಳ್ಳಲಿದೆ.
ನಾಟಕ ರಂಗದ ದಿಗ್ಗಜ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ವಿಜಯ ಕುಮಾರ್ ಕೊಡಿಯಾಲ್ ಬೈಲ್ ರವರು ಈ ನಾಟಕವನ್ನು ಹೊಸತಾಗಿ ರಚನೆ ಮಾಡಿದ್ದು ನಿಟ್ಟೆ ಭಾಗದಲ್ಲಿ ಪ್ರಥಮ ಪ್ರದರ್ಶನ ಇದಾಗಿದೆ.
ಬುಧವಾರ ಸಾಯಂಕಾಲ 6. 30 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಭಕ್ತಭಿಮಾನಿಗಳು ಸಾರ್ವಜನಿಕ ಬಂಧುಗಳು ಈ ದೇಶ ಭಕ್ತಿಯ ನಾಟಕ ವೀಕ್ಷಣೆ ಮಾಡುವಂತೆ ವಿನಂತಿಸಲಾಗಿದೆ .