ರಾಜ್ಯದಲ್ಲದೆ ಕೋಲಾಹಲ ಎಬ್ಬಿಸಿರುವ ಮುಡ ಭೂ ಹಗರಣ ರಾಜ್ಯದ ಮುಖ್ಯಮಂತ್ರಿ ಅವರ ಕುಟುಂಬದ ಸುತ್ತ ಗಿರಕಿ ಹೊಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮುಡ ಹಗರಣದ ಕುರಿತು ಈ ಕೆಳಗಿನ ಪ್ರಮುಖ ಅಂಶಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದಿಟ್ಟರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಮಾಡಿ ವರದಿ ನೀಡಲು ಸರಕಾರವೇ ಸೂಚಿಸಬೇಕು. ಜಿಲ್ಲಾಧಿಕಾರಿಗಳಿಂದ ಮುಡ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ ಶಿಫಾರಸ್ಸು. ಸರ್ಕಾರವೇ ಜಿಲ್ಲಾಧಿಕಾರಿಗಳ ವರದಿಯನ್ನು ಕಸದ ಬುಟ್ಟಿಗೆ ಹಾಕಿತು. 2022ರಲ್ಲಿಯೇ ಮುಡ ಅಕ್ರಮದ ಬಗ್ಗೆ ದೂರುಗಳು ಬಂದಿದ್ದವು. 2022ರಲ್ಲಿ ಬಿಜೆಪಿ ಸರ್ಕಾರದ ಜುಲೈ 2 ರಂದು ಅಕ್ರಮಗಳ ತನಿಖೆಗೆಂದು ತಾಂತ್ರಿಕ ಸಮಿತಿಯನ್ನು ರಚಿಸಿತು. 2023 ನವೆಂಬರ್ 3 ರಂದು ಸರ್ಕಾರಕ್ಕೆ ವರದಿ ನೀಡಿದರು ಒಟ್ಟು 3 ಸಂಪುಟದಲ್ಲಿ ವರದಿ ನೀಡಿದರು. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಸಮಿತಿಯಲ್ಲಿರುವವರು.
ನಗರಾಭಿವೃದ್ಧಿ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನೆ ಹೆಚ್ಚುವರಿ ನಿರ್ದೇಶಕ ಟಿ.ವಿ. ಮುರಳಿ ಅಧ್ಯಕ್ಷತೆಯಲ್ಲಿ ಸದಸ್ಯರಾದ ಬಿ.ಆರ್. ಕಲ್ಪಿನಾಥ್ , ನರ್ಸುಕಳಂತೆ ಇವರನ್ನು ಒಳಗೊಂಡ ವರದಿ ಸರ್ಕಾರಕ್ಕೆ ಸಲ್ಲಿಸಿತ್ತು.
ವರದಿಯಲ್ಲಿ ಹತ್ತು ವರ್ಷಗಳಿಂದ ಬಡಾವಣೆಗಳಿಗೆ ಜಮೀನು ನೀಡಿದ ಭೂಸಂತ್ರಸ್ತರಿಗೆ ಮುಡಾದಿಂದ ಪರಿಹಾರ ನೀಡಿದ ಮಾಹಿತಿ ಇಲ್ಲವೆಂದು ಅಧಿಕಾರಿಗಳು ಟಿಪ್ಪಣಿ ಮಾಡಿ ಬದಲಿ ನಿವೇಶನ ಮಂಜೂರಾತಿಗಳಿಗೆ ನಿಯಮ ಬಾಹಿರವಾಗಿ ಶಿಫಾರಸ್ಸು ಮಾಡುತ್ತಿದ್ದಾರೆ. ಭೂ ಸಂತ್ರಸ್ತರ ಹೆಸರಿನಲ್ಲಿ ಅನ್ಯ ಬಡಾವಣೆಗಳಲ್ಲಿ ಅಕ್ರಮವಾಗಿ ಬದಲಿ ನಿವೇಶನ ಹಂಚಲಾಗುತ್ತಿದೆ ಸರ್ಕಾರ ಇದನ್ನು ಸ್ಥಗಿತಗೊಳಿಸಬೇಕು.
2009 ರಲ್ಲಿ ಸುಪ್ರೀಂಕೋರ್ಟಿನ ಆದೇಶದಂತೆ ಅರ್ಕಾವತಿ ಬಡಾವಣೆಗೆ ಸಂಬಂಧಪಟ್ಟ ಕೇಸ್‌ನಲ್ಲಿ, ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ, ಅಭಿವೃದ್ಧಿ ಮಾಡಿರುವ ನಿವೇಶನ ಲೆಕ್ಕದಲ್ಲಿ 40:60 ಅನುಪಾತದ ಅಡಿ ಖಾಲಿ ನಿವೇಶನಗಳ ಅದೇ ಬಡಾವಣೆ ಅಥವಾ ಅದರ ಮೌಲ್ಯಕ್ಕೆ ಸರಿಸಮಾನವಾದ ಬಡಾವಣೆಗಳಲ್ಲಿ ಮಾತ್ರ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿತ್ತು.
ಅದನ್ನು ಮುಂದೆ 50:50 ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದ್ದು. ಅಂದರೆ ಗರಿಷ್ಠ ಮತ ಭೂ ಮಾಲೀಕನಿಗೆ ದೊರಕಬೇಕಾಗಿರುವ ಅಭಿವೃದ್ಧಿ ಕೊಂಡ ನಿವೇಶನಗಳು 50%ಗೆ ಮೀರಿರಬಾರದು.
ಸರ್ವೋಚ್ಚ ನ್ಯಾಯಾಲಯ ಅರ್ಕಾವತಿ ಬಡಾವಣೆಗೆ ಮಾತ್ರ ಹಿಂದೆ ಆದಂತಹ ಭೂ ಸ್ವಾಧೀನ ಪ್ರಕ್ರಿಯೆಯನ್ನು ಒಳಗೊಂಡಿರುವಂತೆ ಮತ್ತು ಮುಂದೆ ಆಗಬಹುದಾದಂತ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಎಂದು ಸ್ಪಷ್ಟಪಡಿಸಿತ್ತು. ಆದರೆ ಮುಡ ದಲ್ಲಿ ನಡೆದಂತಹ ಹಗರಣ, ಭೂ ಸ್ವಾಧೀನ ಪ್ರಕ್ರಿಯೆ 2009 ಹಿಂದೆ ಆಗಿರುವ ಬಡಾವಣೆಗಳಿಗೂ ಒಳಪಡುವಂತೆ ಮಾಡಿಕೊಂಡಿರುವುದು ಹಗರಣದ ಒಂದು ರೂಪ,
ಇಂದಿನ ಮುಖ್ಯಮಂತ್ರಿಗಳಾಗಿದ್ದಂತ ಸಿದ್ದರಾಮಯ್ಯನವರು 3 ಎಕ್ರೆ 16 ಗುಂಟೆ ಜಮೀನನ್ನು ತಮ್ಮ ಪತ್ನಿಯ ಅವರ ಹೆಸರಿನಲ್ಲಿ, ಪಾರ್ವತಮ್ಮನವರ ತಮ್ಮನಾದವರು ಅರಿಶಿನ ಕುಂಕುಮ ಕೇಂದ್ರ ನೀಡಿದ್ದಾರೆ ಎಂದು ಘೋಷಣೆ ಮಾಡಿಕೊಳ್ಳುತ್ತಾರೆ, ಕೆಸರೆ ಗ್ರಾಮ ಸರ್ವೆ ನಂಬ್ರ 464. ಇದನ್ನು ಅವರು ಬಳುವಳಿಯಾಗಿ ಪಡೆದಿದ್ದು 2006-07, ಅದರ ಬಡಾವಣೆ ಅಭಿವೃದ್ಧಿಗೊಂಡಿದ್ದು ಅದೇ ಸಾಲಿನಲ್ಲಿ. ಆದರೆ, ಮುಖ್ಯಮಂತ್ರಿಗಳು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದುಕೊಳ್ಳಲು, ತಾವು
ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 2017 ಮುಡ ದಲ್ಲಿ ತಮಗೆ ಹೊಸ ನಿಯಮದ ಪ್ರಕಾರ ನಿವೇಶನವನ್ನು ಕೊಡಿ ಎಂದು ಆದೇಶ ಮಾಡುತ್ತಾರೆ. ಸರ್ಕಾರ ಮಾಟ್ಟದಲ್ಲೂ ಸಹ ಪ್ರಸ್ತಾವನೆ ಒಪ್ಪಿಕೊಳ್ಳಲಾಗುತ್ತದೆ.
- 2020ರಲ್ಲಿ ಅವರಿಗೆ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ, ಇದು ಅಂದಿನ ಮುಡ ಅಧಿಕಾರಿಗಳ ನೇತೃತ್ವದಲ್ಲಿ ಆಗಿದೆ, ಇದು ಸರ್ಕಾರಕ್ಕೆ ಪ್ರಸ್ತಾವನೆ ಬಂದಿರಲಿಲ್ಲ ಎನ್ನುವ ವಿಚಾರ, ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ತಮ್ಮ ಪತ್ರದಲ್ಲಿ ಅನುಮೋದನೆ ಮಾಡಿರುತ್ತಾರೆ.
- ನಿವೇಶನ ಹಂಚಿಕೆಯಲ್ಲಿ ಬಿಡಿ ನಿವೇಶನ ಹಂಚಿಕೆ ಮಾಡಿರುವುದು ಕಾನೂನು ಬಾಹಿರವಾಗಿರುವ ವಿಚಾರ, KTCP ಆಕ್ಟ್ ಅಡಿಯಲ್ಲಿ ಬಿಡಿ ನಿವೇಶನಗಳನ್ನು ಕೊಡಲು 75% ಹರಾಜು ಹಾಕಬೇಕು, 25% ಸಾಧಕರಿಗೆ ಮತ್ತು ಅತ್ಯಂತ ವಿಶೇಷ ರಾಷ್ಟ್ರ ಸೇವಕರಿಗೆ ಕೊಡಬೇಕೆನ್ನುವ ಸ್ಪಷ್ಟ ನಿಯಮಗಳಿವೆ ಆದರೆ ಪಾರ್ವತಮ್ಮ ಸಿದ್ದರಾಮಯ್ಯನವರು ಯಾವುದೇ ರೀತಿಯ ದೇಶ ಸೇವೆಯ ಪಟ್ಟಿಗಳನ್ನು ಕೊಡದೆ ಬಿಡಿ ನಿವೇಶನವನ್ನು ಮೈಸೂರಿನ ವಿಜಯನಗರದಲ್ಲಿ ಪಡೆದುಕೊಂಡಿರುವುದು ಕಾನೂನು ಬಾಹಿರವಾಗಿರುವ ವಿಚಾರ. 19820 ಅಭಿವೃದ್ಧಿಗೊಂಡಿರುವ ಬಡಾವಣೆಯಲ್ಲಿ 2006-08ರಲ್ಲಿ ಬಡಾವಣೆಯ ಭೂಸ್ವಾಧೀನ ಆಗಿರುವ ಬದಲಿ ನಿವೇಶನ ನೈತಿಕತೆಯ ಮತ್ತು ಕಾನೂನಾತ್ಮಕವಾದ ಸಮಾಜವಾದಿ ಸಿದ್ದರಾಮಯ್ಯ ಅವರನ್ನು ಮಜಾವಾದಿ ಎಂದು ಘೋಷಣೆ ಮಾಡುವ ಅಂಶ.
ಇತರ ಮೂರು ಪ್ರಕರಣಗಳು 2022ರವರೆಗೂ ನಡೆದಿತ್ತು, ಈ ಪ್ರಕರಣಗಳನ್ನು ಸರಿಯಾಗಿ
ಪತ್ತೆ ಹಚ್ಚಿ ಕಾನೂನಿನ ಕ್ರಮ ಕೈಗೊಳ್ಳಲು ಅಂದಿನ ಬಿಜೆಪಿ ಸರ್ಕಾರ TV Murali Additional Director Town Planning ಇವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಇವರು ತಮ್ಮ ವರದಿಯಲ್ಲಿ 11 ವಂಶಗಳನ್ನು ವಿಚಾರಣೆ ಮಾಡಬೇಕೆಂದು ಸರ್ಕಾರ ಕೋರಿಕೊಂಡದ್ದು, ಅದರಂತೆ ಅಧಿಕಾರಿಗಳು ವಿಸ್ತ್ರತ ವರದಿಯನ್ನು ಎಲ್ಲಾ ರೀತಿ ಪತ್ತೆ ಹಚ್ಚುವ ಕೆಲಸಗಳನ್ನು ಮಾಡಿರುತ್ತಾರೆ.
ಅವರ ವಿಪರ್ಯಾಸಕ್ಕೆ ಸರಿ ಎನ್ನುವಂತೆ 2023 ಮೇ ನಂತರ ಅಕ್ರಮ ಅತಿ ಹೆಚ್ಚಾಗಿ ಕಂಡುಬರುತ್ತದೆ. ಅದರ ವಿಚಾರವಾಗಿ ಅನೇಕ ಅಕ್ರಮಗಳು ಆಗಿವೆ ಅಕ್ರಮಗಳ ಪೈಕಿ.
KTCP ಆಕ್ಟ್ ಉಲ್ಲಂಘನೆ ಆಗಿರುವ ವಿಚಾರ (ಬಿಡಿ ಸೈಟುಗಳ ವಿತರಣೆ ಆಗಿರುವುದು)
2009 ಹಿಂದೆ ಆಗಿದ್ದಂತಹ ಭೂ ಸ್ವಾಧೀಕರ ಪ್ರಕ್ರಿಯೆಗಳಿಗೆ 50:50 ಅನುಪಾತದಲ್ಲಿ ನಿವೇಶನಗಳನ್ನು ನೀಡಿರುವುದು.
- ಮುಡ ಬಡಾವಣೆಗಳ ಪಕ್ಕ ಖಾಸಗಿ ಬಡಾವಣೆಗಳ ನಿರ್ಮಾಣಗೊಂಡಿದ್ದರೆ ನಿರ್ಮಾಣಗೊಂಡಂತಹ ಬಡಾವಣೆಗಳಲ್ಲಿ ಉದ್ಯಾನವನ ಮತ್ತು ರಸ್ತೆಗಳನ್ನು ಮುಡ ಸಣ್ಣಪುಟ್ಟ ಕಾರ್ಯಗಳನ್ನು ಮಾಡಿಸಿಕೊಂಡಂತಹ ಖಾಸಗಿ ಅವರು, ಮುಡ ದವರು ತಮ್ಮ ರಸ್ತೆಗಳನ್ನು ಮತ್ತು ಉದ್ಯಾನವನಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದಿದ್ದಾರೆ.
ಅಕ್ರಮವಾಗಿ ಆಗಿರುವ ಬಡಾವಣೆಗಳ ಪೈಕಿಯೂ ಸಹ, ರಸ್ತೆ ನಿರ್ಮಾಣವನ್ನು ಮುಡ ಕೈಯಲ್ಲಿ ಮಾಡಿಸಿ, ಅದಕ್ಕೂ ಸಹ 50:50 ಅನುಪಾತದಲ್ಲಿ ನಿವೇಶನ ಪಡೆದಿರುವುದು ಕಂಡು ಬ೦ದಿದೆ.
1968 ರಲ್ಲಿ ಒಂದು ಒಡಂಬಡಿಕೆ ಪತ್ರದ ಮೂಲಕ ರೈತರ ಜಮೀನಿಗಳನ್ನು ಪಡೆದುಕೊಂಡು ನಿವೇಶನಗಳನ್ನು ಮಾಡಿದ್ದಂತಹ ಡೆವಲಪರ್ಗಳು, ಈ ಭೂಮಿ ಮುಡ ದಲ್ಲಿ ಬರುತ್ತದೆ ಎಂದು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದಿರುವುದು ಗಮನಹರವಾದಂತಹ ವಿಚಾರ.
STP ನಿರ್ಮಾಣ ಮಾಡಬೇಕಾದರೆ ಕೆರೆಯ ಜಾಗದಲ್ಲೇ ಮಾಡಿರುವುದು ಸಹ ಒಂದು ಅಕ್ರಮ.
- ಹೀಗೆ ಅಕ್ರಮಗಳು ಸಿರಿಮಳೆ ಆಗಿದೆ ವಿಶೇಷವಾಗಿ 2023 ಮೇ ನಂತರ ಎಂದು ತಾಂತ್ರಿಕ ಸಮಿತಿ ವರದಿಯನ್ನು ಕೊಟ್ಟಿದೆ. ಇದನ್ನು ಅಕ್ಟೋಬರ್ 2023ರಲ್ಲಿ ತಾಂತ್ರಿಕ ಸಮಿತಿ ಸಂಪೂರ್ಣ ವರದಿಯನ್ನು ಸಲ್ಲಿಸಿರುತ್ತದೆ.
ಇದಕ್ಕೆ ಸಾಕ್ಷಿಯಾದಂತೆ ಜಿಲ್ಲಾಧಿಕಾರಿಗಳು ಸಹ 14 ಪತ್ರವನ್ನು ರಾಜ್ಯ ಸರ್ಕಾರಕ್ಕೆ ಬರೆದಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
- ಸರ್ಕಾರವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದು ಗಮನಾರ್ಹ ವಿಚಾರ
ನಾಲ್ಕು ಸಾವಿರ ಕೋಟಿಗೂ ಮೀರಿದ ಹಗರಣ ಮುಡ ದಲ್ಲಿ ನಡೆದಿದೆ.
ಇದಕ್ಕೆ ಅಡಿಪಾಯ ಹಾಕಿದವರೇ ಸಿದ್ದರಾಮಯ್ಯನವರು, ಅವರು ಭೂಮಿಯನ್ನು ಪಡೆಯುವ ಕಾರಣದಿಂದಾಗಿ 2006ರಲ್ಲಿ ಅಭಿವೃದ್ಧಿ ಗೊಂಡಿರುವ ಬಡಾವಣೆಗೆ 50:50 ಅನುಪಾತದಲ್ಲಿ ಬಿಡಿ ನಿವೇಶನಗಳನ್ನು ಪಡೆದಿದ್ದು ಅದಕ್ಕೆ ಮುನ್ನುಡಿ ಮಾಡಿದ ಕಾನೂನು ಬಹಿರವಾದ ವಿಚಾರ.
ಇದಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ತನಿಖೆ ಮಾಡಲು ನೇಮಿಸಿ ಕಣ್ಣು ಒರೆಸುವ ಕೆಲಸ ಮಾಡುವ ಹಾದಿಯಲ್ಲಿ ಸಿದ್ದರಾಮಯ್ಯ ಅವರು ಹೊರಟಿದ್ದಾರೆ. ಯಾರೇ ತಪ್ಪೇ ಮಾಡಿದ್ದರು ಪಕ್ಷಾತೀತವಾಗಿ ಹೊರಗೆ ಬರಬೇಕೆಂದರೆ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿಸಿ ನಿಷ್ಪಕ್ಷಪಾತವಾಗಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು.
ಮುಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ, ಕಾನೂನು ಬಾಹಿರ ಚಟುವಟಿಕೆ.
ಸರ್ವೋಚ್ಚ ನ್ಯಾಯಾಲಯ
ತೀರ್ಪಿನ ಮೂಲಕ 2009 ನಂತರ ಭೂಸ್ವಾಧೀನ ಪಡಿಸುಕೊಂಡಂತಹ ಬಡಾವಣೆಗಳಿಗೆ ಮಾತ್ರ 50:50 ಅನುಪಾತದ ಅಡಿಯಲ್ಲಿ, ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ನಿವೇಶನ ನೀಡಲು ಅವಕಾಶವಿರುತ್ತದೆ.
ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಮ್ಮನಿಗೆ ಬಂದಿರುವ ಅರಿಶಿಣ ಕುಂಕುಮದ ರೂಪದ ಕೆಸರೇಗದ್ದೆ ಸರ್ವೆ ನಂಬರ್ 464, 3 ಎಕರೆ 16 ಗುಂಟೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು 1992, ಬಡಾವಣೆ ಅಭಿವೃದ್ಧಿ ಕೊಂಡಂತಹ ಸಮಯ 2006-07.
ಸರ್ವೋಚ್ಚ ನ್ಯಾಯಾಲಯ ಅರ್ಕಾವತಿ ಬಡಾವಣೆಯ ತೀರ್ಪು ನೀಡಿದ ಸಂದರ್ಭದಲ್ಲಿ, ಸ್ಪಷ್ಟವಾಗಿ ಇನ್ನು ಮುಂದೆ ಹೊಸ ಪಡಿಸಿಕೊಳ್ಳುವ ಭೂಮಿ ಸ್ವಾಧೀನದ ಪ್ರಕ್ರಿಯೆಗೆ ಮಾತ್ರ 50:50 ಅನುಪಾತ ಎನ್ನುವ ಸ್ಪಷ್ಟಮಾನದಂಡನೆ ಶರತ್ತು ಬದ್ಧವಾಗಿ ವಿಧಿಸುತ್ತದೆ.
ಕೇವಲ ಬೆಂಗಳೂರಿನ ಆರ್ಕಾವತಿ ಬಡಾವಣೆಗೆ ಮಾತ್ರ ಈ ವಿಶೇಷವಾದಂತಹ ಸೌಲಭ್ಯವನ್ನು 2002 ಭೂ ಸ್ವಾದಿನ ಪ್ರೇಸಿಕೊಂಡಂತ ಭೂಮಿಗೆ ಒದಗಿಸಿಕೊಡಲಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ, 2017ರಲ್ಲೇ ಅಂದಿನ ಅಧಿಕಾರಿಗಳು ಅಂದಿನ ಮುಖ್ಯಮಂತ್ರಿ ಅವರ ನಿರ್ದೇಶನದ ಮೂಲಕ, ಪ್ರಸ್ತಾವವನ್ನು ಮಾಡಿ ಅಂದು ಸರ್ಕಾರಕ್ಕೆ ಕಳಿಸಿ ಕೊಡುತ್ತಾರೆ, ಸರ್ಕಾರ ತನ್ನ ಒಪ್ಪಿಗೆಯನ್ನು ಸೂಚಿಸಿ 2017 ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಸ್ತಾವಕ್ಕೆ ಸರಿ ಎಂದು ಮಂಜೂರು ಮಾಡುತ್ತಾರೆ.
ಆದರೆ ಅಂದಿನ ಮುಡ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ಮುಂದುವರಿಸಲು ಧೈರ್ಯ ಮಾಡುವುದಿಲ್ಲ.
ಆದರೆ 2020 ರಲ್ಲಿ ಅಂದಿನ ಮುಡ ಕಮಿಷನರ್ ತಮ್ಮ ಸ್ವಯಂ ನಿರ್ಧಾರವನ್ನು ತೆಗೆದುಕೊಂಡು, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆಯೇ, ತಮ್ಮ ನೇತೃತ್ವದಲ್ಲಿ ಪಾರ್ವತಮ್ಮ ಸಿದ್ದರಾಮಯ್ಯನವರಿಗೆ 50:50 ಅನುಪಾತದಲ್ಲಿ ನಿವೇಶನ ನೀಡಲು ಮಂಜೂರು ಮಾಡುತ್ತಾರೆ.
ಸರ್ವೋಚ್ಚ ನ್ಯಾಯಾಲಯ 2009ರ ಆದೇಶದ ಮೂಲಕ, 50:50 ಅನುಪಾತದಲ್ಲಿ ಪರಿಹಾರ ನೀಡಬೇಕಿದ್ದರೆ, ಅದೇ ಬಡಾವಣೆಯಲ್ಲಿ ಅಥವಾ ಅದೇ ಸಮಯದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆಗಳು ಅಥವಾ ಥಂಧಾ ನಂತರ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಮಾತ್ರ ನಿವೇಶನ ನೀಡಬೇಕೆಂದು ಸ್ಪಷ್ಟ ನಿಯಮಾವಳಿಗಳನ್ನು ಸೂಚಿಸಿತ್ತು.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, 1980 ರಲ್ಲಿ ಅಭಿವೃದ್ಧಿಪಡಿಸಿರುವ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತದ ಬಡಾವಣೆಯಲ್ಲಿ 14 ವಿಶೇಷವಾಗಿ ಬಿಡಿ (Stray Sites) ನಿವೇಶನಗಳು ನೀಡಲಾಗಿದೆ.
Stray sites ಬಿಡಿ ನಿವೇಶನಗಳು (ಯಾವುದೇ ಬಡಾವಣೆಗಳಲ್ಲಿ ಹಂಚಿಕೆಯಾಗಿ ಉಳಿದುಕೊಂಡಿರುವ ನಿವೇಶನಗಳು, ಹಂಚಿಕೆಯಾಗಿ ಸರಿಯಾದ ಮೊತ್ತವನ್ನು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿಯಮಾವಳಿಗಳ ಪ್ರಕಾರ ಕಟ್ಟದಿದ್ದಲ್ಲಿ ಉಳಿದುಕೊಂಡಿರುವ ನಿವೇಶನಗಳು)
1962 KTCP ಆಕ್ಟ್ ನಿಯಮಾವಳಿಗಳ ಪ್ರಕಾರ, ಬಿಡಿ ನಿವೇಶನಗಳನ್ನು ನೀಡಲು ಎರಡು ಶರತ್ತುಗಳಿವೆ.
ಬಿಡಿ ನಿವೇಶನಗಳ ಪೈಕಿ 75% ಹರಾಜಿನ ಮೂಲಕ ಮಾತ್ರ ನೀಡಬೇಕು, 25% ವಿಶೇಷವಾದಂತಹ ಸಾಧಕರಿಗೆ ಅಂದರೆ (ಕ್ರೀಡಾ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನ, ಯುದ್ಧದಲ್ಲಿ ಮಡಿದ ಮಡದಿಯರಿಗೆ, ಭಾರತವನ್ನು ಗಡಿ ಪ್ರದೇಶಗಳಲ್ಲಿ ಸಂರಕ್ಷಿಸಿ ಪ್ರಾಣ ತ್ಯಜಿಸಿದಂತಹ ಮಹಾಯುದ್ಧರಿಗೆ, ಹೀಗೆ ಸ್ಪಷ್ಟವಾದಂತ ನಿಯಮಾವಳಿಗಳು ಇರುತ್ತವೆ)
ಪಾರ್ವತಮ್ಮ ಸಿದ್ದರಾಮಯ್ಯನವರು ಯಾವ ವಿಶೇಷವಾದ ಸಾಧನೆಯನ್ನು ಅಥವಾ ಕರ್ನಾಟಕದಲ್ಲಿ, ಯಾವುದಾದರೂ ವಿಶೇಷವಾದಂತಹ ಸ್ಥಾನಮಾನಗಳನ್ನು ಪಡೆದಿದ್ದಾರೆಯೇ, ಅದು ಗೊತ್ತಿಲ್ಲದ ವಿಚಾರ, ಇಲ್ಲಿಯವರೆಗೂ ಯಾವ ಸಾಧನೆಯನ್ನು ಎಳ್ಳು ಸಹ ಪಾರ್ವತಮ್ಮ ಸಿದ್ದರಾಮಯ್ಯನವರು ಹೇಳಿಕೊಂಡಿಲ್ಲ.
ಆದರೆ ಮುಡ ಅಧಿಕಾರಿಗಳು ಮಾತ್ರ ಅವರಿಗೆ ಬಿಡಿ ನಿವೇಶನವನ್ನು ಅವರ ಸ್ವಂತ ಧೈರ್ಯದ ಮೇಲೆ ಕೊಟ್ಟಿದ್ದಾರೆ.
ಸಮಾಜವಾದಿ ಸಿದ್ದರಾಮಯ್ಯನವರು, ಮಜಾ ಅನ್ಡಿಫೈನೈಡ್ ವಾದಿಯಾಗಿರುವುದಕ್ಕೆ ಇದು ಒಂದು ಸ್ಪಷ್ಟ ನಿರ್ದೇಶನ.
ಅದೇ ಸಮಯದಲ್ಲಿ ಭೂಸ್ವಾಧೀನ ಆಗಿರುವಂತಹ ಅನೇಕ ಬಡಾವಣೆಗಳಲ್ಲಿ ತಮ್ಮ ಭೂಮಿಯನ್ನು ಕಳೆದುಕೊಂಡಂತಹ ಸಿದ್ದರಾಮಯ್ಯನವರು ಕೊಟ್ಟಿಲ್ಲ ? ರೈತರಿಗೆ ಪರಿವಾರವನ್ನು ಇಂಥ
ಅರ್ಕಾವತಿಯಲ್ಲಿ ಭೂಮಿಯನ್ನು ಕಳೆದುಕೊಂಡಂತಹ ಒಬ್ಬ ರೈತ, ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು BDA ಎಲ್ಲಿ ದಿನ ಸುತ್ತ ಆಡುತ್ತಾ ಪರಿಹಾರವನ್ನು ಪಡೆದುಕೊಳ್ಳಲು ಆಗದೆ, ಕೊನೆಗೆ 2002ರ ಭೂ ಸ್ವಾಧೀನ ಅಧಿನಿಯಮದ ಪ್ರಕಾರ ಜಕ್ಕೂರಿನ ಅರ್ಥ ಎಕರೆ ಭೂಮಿಗೆ ಕೇವಲ 11 ಲಕ್ಷ ಮೊತ್ತವನ್ನು ಪಡೆದು ತನ್ನ ಮಗಳನ್ನು ಉಳಿಸಿಕೊಳ್ಳಲಾಗದೆ ಇಂದು ಹುಲಿ ಕೆಲಸ ಮಾಡುತ್ತಿದ್ದಾನೆ.
ಇಂತಹ ರೈತರ ಕಣ್ಣೀರು, ಸಿದ್ದರಾಮಯ್ಯನವರು ವರಿಸುತ್ತಾರೆ ಎಂದರೆ ತಮ್ಮ ಮನೆಯ ಭೂಮಿ ಒಡೆತನವನ್ನು ಮಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾರೆ ವರೆತು ಭೂಮಿಯನ್ನು ಕಳೆದುಕೊಂಡಂತಹ ರೈತರಿಗೆ ಪರಿಹಾರವನ್ನು ಕೊಟ್ಟಿಲ್ಲ.
ಮುಡ ನಾಲ್ಕು ಸಾವಿರ ಕೋಟಿಗೂ ಮೇಲಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೈಲಿಗೆ ಬಂದಿದೆ, ಇದಕ್ಕೆ ಮೊದಲು ಅಡಿಪಾಯ ಆಗಿರುವುದೇ ಸಿದ್ದರಾಮಯ್ಯನವರು.
ನಗರಾಭಿವೃದ್ಧಿಯ ಆಕಾರ ಚಕಾರ ತಿಳಿಯದಿರುವ ತಮ್ಮ ಬಲಕೈ ಬಂಟ ಬೈರತಿ ಸುರೇಶ್ ಅವರಿಗೆ ನಗರಾಭಿವೃದ್ಧಿ ಇಲಾಖೆಯನ್ನು ಕೊಡಿಸಿ, ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಾಡಲು ಸೂಚನೆ ಕೊಟ್ಟಿರುವುದೇ ಸಿದ್ದರಾಮಯ್ಯನವರು.
2023 ಮೇ ನಂತರ ಆಗಿರುವ ಮುಡ ಹಗರಣಕ್ಕೆ ನಾಲ್ಕು ಮಾನದಂಡಗಳು.
16a. ಮುಡ ಪಕ್ಕದಲ್ಲಿ ಬಂದು ಕೊಂಡಿರುವ ಅಕ್ರಮವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಅಧಿಕಾರಿಗಳ ಸ್ನೇಹವನ್ನು ಬೆಳೆಸಿಕೊಂಡು ಮುಡ ದಿಂದ ರಸ್ತೆ ಮತ್ತು ಒಳಚರಂಡಿಗಳನ್ನು ಅಭಿವೃದ್ಧಿಪಡಿಸಿ ನಮ್ಮ ರಸ್ತೆಯನ್ನು ಮುಡ ಭೂಸ್ವಾಧೀನ ಪಡಿಸಿಕೊಂಡಿದೆ ಎಂದು 50:50 ಅನುಪಾತದಲ್ಲಿ ಪರಿಹಾರವನ್ನು ಪಡೆದಿದ್ದಾರೆ.
16b. ಮುಡ ಪಕ್ಕದಲ್ಲಿ ಇರುವ ಮಾನ್ಯತೆ ಪಡೆದಿರುವ ಬಡಾವಣೆಗಳಲ್ಲೂ ರಸ್ತೆ ಮತ್ತು ಉದ್ಯಾನವನವನ್ನು, ಮುಡ ಅಭಿವೃದ್ಧಿ ಪಡಿಸಿದ್ದಾರೆ ಅಂದರೆ ನಮ್ಮ ಮಾಲೀಕತ್ವದ ಭೂಮಿಯನ್ನು ಮುಡ ಪಡೆದಿದ್ದಾರೆ ಎಂದು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದಿದ್ದಾರೆ.
16c. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ 2009ರ ನಂತರ ಭೂಸ್ವಾಧೀನ ಪಡೆಸಿಕೊಂಡಿದ್ದರೆ ಮಾತ್ರ 50:50 ನಿವೇಶನಗಳನ್ನು ನೀಡಬೇಕೆಂದಿದ್ದರೆ, 1962-68 ಈ ಸಮಯದಲ್ಲೂ ಒಡಂಬಡಿಕೆಗಳನ್ನು ಮಾಡಿಕೊಂಡು ನಿವೇಶನ ನಿರ್ಮಾಣ ಮಾಡಿರುವ. ಭೂಮಾಲೀಕರುಗಳಿಗೂ ನಿವೇಶನಗಳನ್ನು ನೀಡಲಾಗಿದೆ.
16d. ಬಿಡಿ ನಿವೇಶನಗಳ ಬಗ್ಗೆ KTCP ನಿಯಮಾವಳಿಗಳು ಇದ್ದರೂ ಸಹ, ಸಂಪೂರ್ಣವಾಗಿ ಗಾಳಿಗೆ ತೂರಿ 50:50 ಅನುಪಾತದಲ್ಲಿ ಬರುವ ಪ್ರಮುಖ ನಾಯಕರಗಳು ಎಂದು ಗುರುತಿಸಲ್ಪಡುವ ಕೆಲವರಿಗೆ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ.
ಬೈರತಿ ಸುರೇಶ್ ಅವರು ನಗರ ಅಭಿವೃದ್ಧಿ ಸಚಿವರಾದ ಮೇಲೆ ಹಳೇ ಭೂ ಪಾಣಿದಾರರನ್ನು ಹುಡುಕಿ ಅವರಿಗೆ 50:50 ಅನುಪಾತದಲ್ಲಿ ನಿಮಗೆ ನಿವೇಶನಗಳನ್ನು ಕೊಡುತ್ತೇವೆ ಅದರಲ್ಲಿ 80% ಬೈರತಿ ಸುರೇಶ್ ಕಡೆಯವರಿಗೆ, 20% ಆ ಪಾಣಿದಾರನಿಗೆ ಎನ್ನುವ ಅಲ್ಲಿಕಿತ ನಿಯಮಾವಳಿ ಒಗಆಂ ಕಳೆದ 13 ತಿಂಗಳು ನಡೆದುಕೊಂಡು ಬಂದಿದೆ.
ಬಿಜೆಪಿ ಸರ್ಕಾರ ಇದ್ದಾಗಲೇ ನಿಯಮಾವಳಿಗಳನ್ನು ಮೀರಿ ಕೆಲವು ಕಾರ್ಯಗಳು ನಡೆಯುತ್ತಿದೆ ಎಂದಾಗ, 2022 ನವೆಂಬರ್ ನಲ್ಲಿ ಹಿರಿಯ ಅಧಿಕಾರಿಗಳ ಒಂದು ತನಿಕಾ ತಂಡವನ್ನು ರಚಿಸಿ, ವರದಿಯನ್ನು ಸಲ್ಲಿಸುವಂತೆ ಕೋರಿತ್ತು.
18a. 2023 ಅಕ್ಟೋಬರ್ ನಲ್ಲಿ ತನಿಕಾ ತಂಡ ತನ್ನ ಸ್ಪಷ್ಟವರಿದಿಯನ್ನು ನೀಡಿದೆ, ಬದಲಿ ನಿವೇಶನಗಳು, ಇಡೀ ನಿವೇಶನಗಳು, 50:50 ಅನುಪಾತದಲ್ಲಿ ನಡೆಯುತ್ತಿರುವ ಅಕ್ರಮಗಳು ಏನೆಂದು ಸ್ಪಷ್ಟವಾಗಿ ಉಲ್ಲೇಖಿಸಿವೆ.
18b. ಜಿಲ್ಲಾಧಿಕಾರಿಗಳು ಕರ್ನಾಟಕ ಸರ್ಕಾರಕ್ಕೆ 14 ಪತ್ರಗಳನ್ನು ಬರೆದಿದ್ದರೂ, ತನಿಖಾ ತಂಡ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಪತ್ರಗಳನ್ನು ಕಸದ ತೊಟ್ಟಿಗೆ ಎಸೆದಂತಿತ್ತು.
4,000 ಕೋಟಿಗೂ ಮೀರಿದ ಬ್ರಹ್ಮಾಂಡ ಭ್ರಷ್ಟಾಚಾರ, ಸಿದ್ದರಾಮಯ್ಯನವರು ಹಾಕಿರುವ ಅಡಿಪಾಯದಲ್ಲಿ ಬೈರತಿ ಸುರೇಶ್ ಅವರು ನಿರ್ಮಿಸಿರುವ ಕಟ್ಟಡದ ಅಡಿಯಲ್ಲಿ ಕರ್ನಾಟಕದ ಸಾಮಾನ್ಯ ರೈತ ತತ್ತರಿಸಿದ್ದಾನೆ.
ಇದೆಲ್ಲದಕ್ಕೂ ತೇಪೆ ಹಾಕುವಂತೆ, ಇಬ್ಬರು ಅಧಿಕಾರಿಗಳನ್ನು ತನಿಖಾ ಅಧಿಕಾರಿಗಳನ್ನಾಗಿ ನೇಮಿಸಿ, ಜನರ ಕಣ್ಣಿಗೆ ಮಂಕು ಬೂದಿ ಎರಚಲು ಹೊರಟಿದ್ದಾರೆ.
ಸರಿಯಾದ ಸತ್ಯ ಅವರಿಗೆ ಬರಬೇಕೆಂದರೆ ಒಬ್ಬ ನಿಷ್ಪಕ್ಷಪಾತವಾಗಿರುವ ಹಿರಿಯ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸಿಬಿಐ ತನಿಖೆಯನ್ನು ನಡೆಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅಗ್ರಹಿಸಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ವಕ್ತಾರರಾದ ಗೀತಾಂಜಲಿ ಎಮ್. ಸುವರ್ಣ, ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಮಾಧ್ಯಮ ಪ್ರಮುಖ್
ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.