ಚಿಕ್ಕಮಗಳೂರು: ಎಟಿಎಂ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅದರಲ್ಲಿದ್ದ 5 ಲಕ್ಷ ರೂ ಸುಟ್ಟು ಭಸ್ಮವಾಗಿದೆ. ಭಾನುವಾರ ತಡರಾತ್ರಿ ಈ ಘಟನೆ ನಗರದ ಐಜಿ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಎಟಿಎಂ ಕೊಠಡಿಯ ಎಸಿಯ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಬೆಂಕಿ ಇಡೀ ಎಟಿಎಂ ಕೊಠಡಿ ಆವರಿಸಿದೆ. ಎಟಿಎಂ ಕೊಠಡಿಯಲ್ಲಿದ್ದ ಹಣ ತುಂಬುವ ಮೆಷಿನ್ ಹಾಗೂ ಎಟಿಎಂ ಮೆಷಿನ್ ಸುಟ್ಟು ಹೋಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಮೇಲೆ ಬ್ಯಾಂಕ್ ಶಾಖೆಯಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.