ಶಿವಮೊಗ್ಗ: ಚಿಕ್ಕ ಮಕ್ಕಳನ್ನು ಎಷ್ಟು ಜಾಗೃತೆಯಿಂದ ನೋಡಿದರೂ ಸಾಲದು. ಇಲ್ಲೊಂದು ಒಂದೂವರೆ ಮಗು ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಆಟವಾಡುತ್ತಿದ್ದ ಮಗು ಮುಚ್ಚಳ ನುಗಿ, ಉಸಿರಾಟ ನಡೆಸಲು ಸಾಧ್ಯವಾಗದೆ ಸಾವನ್ನಪ್ಪಿದೆ.
ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬವರ ಪುತ್ರ ನಂದೀಶ್ ಮೃತಪಟ್ಟ ಮಗು. ಬುಧವಾರ ಬೆಳಿಗ್ಗೆ ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ನಂದೀಶ್ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಮುಚ್ಚಳ ನುಂಗಲ್ಪಟ್ಟು, ಗಂಟಲಲ್ಲಿ ಸಿಲುಕಿದೆ. ನಂತರ ಮಗುವಿಗೆ ಉಸಿರಾಟಕ್ಕೆ ಕಷ್ಟವಾಗಿದೆ. ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.