Sunday, July 21, 2024
Homeರಾಜ್ಯನಟ ದರ್ಶನ್‌ ಖೈದಿ ನಂಬರಿನಲ್ಲಿ ಮಗುವಿನ ಫೋಟೊ ಶೂಟ್‌ | ಅಂಧಾಭಿಮಾನ ಪ್ರದರ್ಶಿಸಲು ಹೋದ ಹೆತ್ತವರಿಗೆ...

ನಟ ದರ್ಶನ್‌ ಖೈದಿ ನಂಬರಿನಲ್ಲಿ ಮಗುವಿನ ಫೋಟೊ ಶೂಟ್‌ | ಅಂಧಾಭಿಮಾನ ಪ್ರದರ್ಶಿಸಲು ಹೋದ ಹೆತ್ತವರಿಗೆ ಈಗ ಸಂಕಷ್ಟ!

ಬೆಂಗಳೂರು: ಕೊಲೆ ಕೇಸಿನಲ್ಲಿ ಬಂಧಿತನಾಗಿರುವ ನಟ ದರ್ಶನ್‌ ಖೈದಿ ನಂಬರಿನಲ್ಲಿ ತಮ್ಮ ಮಗುವಿನ ಫೋಟೊ ಶೂಟ್‌ ಮಾಡಿಸಿದ್ದ ಹೆತ್ತವರಿಗೆ ಈಗ ಸಂಕಷ್ಟ ಎದುರಾಗಿದೆ. ನಟನ ಕುರಿತ ತಮ್ಮ ಅಂಧಾಭಿಮಾನ ಪ್ರದರ್ಶಿಸಲು ಹೋದ ಹೆತ್ತವರಿಗೆ ಬಿಸಿ ಮುಟ್ಟಿಸಲು ಈಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.
ವಿಷಯಕ್ಕೆ ಸಂಬಂಧಿಸಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಈಗ ಪೊಲೀಸ್‌ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯ ನಡೆದಿದೆ.


ಈ ರೀತಿ ಫೋಟೊ ಶೂಟ್‌ ಮಾಡಿರುವುದು ಖಂಡನೀಯ. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಇವತ್ತು ಪೊಲೀಸ್‌ ಇಲಾಖೆಗೆ ಐಟಿ ಸೆಲ್‌ ಪತ್ರ ಬರೆಯಲಾಗುತ್ತದೆ. ಫೋಟೊ ಶೂಟ್‌ ಮಾಡಿಸಿದವರ ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗದ ಸದಸ್ಯ ಶಶಿಧರ್‌ ಕೊಸಂಬೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular