Sunday, July 14, 2024
HomeUncategorizedಕುಸಿದು ಬಿದ್ದ ಮಗು: ರಕ್ಷಿಸಿದ ಯೋಧ: ವಿಡಿಯೋ ವೈರಲ್‌

ಕುಸಿದು ಬಿದ್ದ ಮಗು: ರಕ್ಷಿಸಿದ ಯೋಧ: ವಿಡಿಯೋ ವೈರಲ್‌

ಆಗ್ರಾ: ಪೋಷಕರೊಂದಿಗೆ ತಾಜ್‌ ಮಹಲ್‌ಗೆ ಭೇಟಿಕೊಟ್ಟಿದ್ದ ಎರಡು ವರ್ಷದ ಮಗು ಹಠಾತ್‌ ಕುಸಿದು ಬಿದ್ದಿದ್ದು, ಅದನ್ನು ಸಿಐಎಸ್‌ಎಫ್‌ ಯೋಧರೊಬ್ಬರು ರಕ್ಷಿಸಿರುವ ವಿಡಿಯೊವಂದು ವೈರಲ್‌ ಆಗಿದೆ. ಬೆಳಗಾವಿ ಮೂಲದ ಮಗು ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಜ್ಞೆ ತಪ್ಪಿ ಬಿದ್ದತ್ತು. ಹೈಪೋಕ್ಸಿಯಾದಿಂದ ಮಗು ಅಸ್ವಸ್ಥಗೊಂಡಿದೆ. ಕೂಡಲೇ ಮಗುವನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು.
ಈ ವೇಳೆ ಸಿಐಎಸ್‌ಎಫ್‌ ಯೋಧರೊಬ್ಬರು ತಕ್ಷಣವೇ ಆಂಬುಲೆನ್ಸ್‌ ನಲ್ಲಿ ಸಿಪಿಆರ್‌ ಮಾಡಿ ಮಗುವಿಗೆ ಪುನರ್‌ ಜನ್ಮ ನೀಡಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಮಗು ಸುಧಾರಿಸಿಕೊಳ್ಳುತ್ತಿದೆ.

RELATED ARTICLES
- Advertisment -
Google search engine

Most Popular