Friday, March 21, 2025
Homeಮೂಡುಬಿದಿರೆಮಕ್ಕಳು ಹೆತ್ತವರನ್ನೇ ಅನುಕರಿಸುತ್ತಾರೆ.. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿರಿಯರು ಮಾದರಿಯಾಗಬೇಕು - ರೋ,-ಸತೀಶ್ ಬೋಳಾರ್

ಮಕ್ಕಳು ಹೆತ್ತವರನ್ನೇ ಅನುಕರಿಸುತ್ತಾರೆ.. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿರಿಯರು ಮಾದರಿಯಾಗಬೇಕು – ರೋ,-ಸತೀಶ್ ಬೋಳಾರ್

ಮೂಡುಬಿದರೆ: ಅಕ್ಷರಭ್ಯಾಸದ ಜೊತೆಗೆ ಮಕ್ಕಳ ಪಾಲನೆ ಪೋಷಣೆ ಮತ್ತು ಸಂಸ್ಕಾರದ ಶಿಕ್ಷಣ ಬಹು ಮುಖ್ಯ ಅಂತಹ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪೋಷಕರು ಸಹಕರಿಸಬೇಕು ಎಂದು ರೋಟರಿ ಕ್ಲಬ್ 3181 ನ ನಿಯೋಜಿತ ಜಿಲ್ಲಾ ಉಪ ರಾಜ್ಯಪಾಲ ರೋ.ಸತೀಶ್ ಬೋಳಾರ್ ಅಭಿಪ್ರಾಯ ಪಟ್ಟರು ಮೂಡುಬಿದರೆಯ ರೋಟರಿ ವಿದ್ಯಾ ಸಂಸ್ಥೆ ಯ ಪೋಷಕರ ವಾರ್ಷಿಕ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಇವರು ಮಾತನಾಡುತ್ತಿದ್ದರು.
ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿಎಂ ಅವರು ಸಭಾಧ್ಯಕ್ಷತೆಯನ್ನು ವಹಿಸಿ ರೋಟರಿ ವಿದ್ಯಾ ಸಂಸ್ಥೆ ನಡೆದು ಬಂದ ವಿಚಾರಗಳ ಬಗ್ಗೆ ಮಾತನಾಡಿದರು ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅನಂತ ಕೃಷ್ಣರಾವ್ ಇವರು ಸಂಸ್ಥೆಯ ಪ್ರಗತಿ ಮತ್ತು ಯೋಜನೆಗಳ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ರತ್ನಾಕರ ಜೈನ್, ಸಂಸ್ಥೆಯ ಉಪಾಧ್ಯಕ್ಷ ಜಯರಾಮ ಕೋಟ್ಯಾನ್, ಪದವಿ ಪೂರ್ವ ಕಾಲೇಜಿನ ಸಂಚಾಲಕ J W ಪಿಂಟೋ ಹಾಗೂ ಆಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ರೂಪಾ ಮಸ್ಕರೇನಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತಿಲಕಾ ಅನಂತವೀರ ಜೈನ್ ತಮ್ಮ ವಿಭಾಗದ ಶೈಕ್ಷಣಿಕ ಮಾಹಿತಿಯನ್ನು ಮಂಡಿಸಿದರು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರವೀಣ್ ಚಂದ್ರ ಜಯ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು ಪದವಿ ಪೂರ್ವ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ಮರಾಠೆ ವಂದನಾರ್ಪಣೆಗೈದರು ಶಿಕ್ಷಕಿ ರಮ್ಯಾ ಮತ್ತು ದೀಪಾ ಕಾರ್ಯಕ್ರಮವನ್ನು ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular