Saturday, October 5, 2024
Homeರಾಷ್ಟ್ರೀಯಮಕ್ಕಳ ಅಪಹರಣ | ಸತತ 3 ಗಂಟೆಗಳ ಕಾರ್ಯಾಚರಣೆ; ಅಕ್ಕ-ತಮ್ಮನ ರಕ್ಷಿಸಿದ ಪೊಲೀಸರು

ಮಕ್ಕಳ ಅಪಹರಣ | ಸತತ 3 ಗಂಟೆಗಳ ಕಾರ್ಯಾಚರಣೆ; ಅಕ್ಕ-ತಮ್ಮನ ರಕ್ಷಿಸಿದ ಪೊಲೀಸರು

ನವದೆಹಲಿ: ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಅಪಹರಣಕ್ಕೀಡಾಗಿದ್ದ ಅಕ್ಕ-ತಮ್ಮನನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ. ಪೊಲೀಸರ ದಕ್ಷ ಕಾರ್ಯಾಚರಣೆಯ ಮೂಲಕ 11 ವರ್ಷದ ಬಾಲಕಿ ಹಾಗೂ 3 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ.
ಅಪಹರಣಕಾರ ಪೋಷಕರಿಗೆ 50 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಶಕರಪುರದ ವಿಕಾಸ್‌ ರಸ್ತೆಯಲ್ಲಿ ಸ್ವೀಟ್‌ ಅಂಗಡಿಯಲ್ಲಿ ತಿನಿಸು ಖರೀದಿಸಲು ಮಕ್ಕಳ ತಂದೆ ಹೋಗಿದ್ದಾಗ, ಕಾರಿನಲ್ಲಿದ್ದ ಮಕ್ಕಳನ್ನು ಪಾರ್ಕಿಂಗ್‌ ಕೆಲಸಗಾರನಂತೆ ನಟಿಸಿ ಅಪಹರಣಕಾರ ಅಪಹರಿಸಿದ್ದಾನೆ. ತಂದೆ ನೀಡಿದ ದೂರನ್ನು ಆಧರಿಸಿ ಎರಡು ವಿಶೇಷ ತಂಡಗಳನ್ನು ರಚಿಸಿ ಸತತ ಮೂರು ಗಂಟೆಗಳ ಕಾಲ 20 ವಾಹನಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ತಂದೆ ಲಕ್ಷ್ಮಿ ನಗರದ ಪೊಲೀಸರ ವಿಶೇಷ ತಂಡ ಹಾಗೂ ತಾಯಿ ಜೊತೆ ಶಕರಪುರ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.


ದೆಹಲಿಯಿಂದ 100 ಕಿ.ಮೀ. ಕ್ರಮಿಸಿದ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನೆರೆಯ ಜಿಲ್ಲಾ ಪೊಲೀಸರು, ಸಿಆರ್‌ಪಿಎಫ್‌ ಪಡೆ ಸಹಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular