Saturday, September 14, 2024
Homeರಾಜ್ಯಮಕ್ಕಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿ ಕಡೆಗೆ ಗಮನ ಹರಿಸಬೇಕಾಗಿದೆ: ಸಾಲಿಗ್ರಾಮ ಗಣೇಶ್‌ಶೆಣೈ

ಮಕ್ಕಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿ ಕಡೆಗೆ ಗಮನ ಹರಿಸಬೇಕಾಗಿದೆ: ಸಾಲಿಗ್ರಾಮ ಗಣೇಶ್‌ಶೆಣೈ

ದಾವಣಗೆರೆ : ಪ್ರಸ್ತುತ ದಿನಮಾನಗಳಲ್ಲಿ ಹೊಸ ಹೊಸ ತಂತ್ರಜ್ಞಾನದ ಭರಾಟೆಯಲ್ಲಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಕೊರತೆ ಕಾಣುತ್ತಿರುವುದು ಸರ್ವೇಸಾಮಾನ್ಯ, ಮಕ್ಕಳು ಕೇವಲ ಪಠ್ಯಪುಸ್ತಕ ಅಂಕಪಟ್ಟಿಗಳಿಗೆ ಸೀಮಿತವಾಗದೆ ನಮ್ಮ ನಾಡು ನುಡಿ ಇತಿಹಾಸ ಪರಂಪರೆ ಸಾಮಾಜಿಕ ಕಾಳಜಿ ಯೊಂದಿಗೆ ಶಾಲಾ ವಾದ ಮನಸ್ಥಿತಿಯಲ್ಲಿ ಇದ್ದರೆ ಜೀವನಕ್ಕೆ ಸಾರ್ಥಕತೆ ಬರುತ್ತದೆ ಪವಿತ್ರವಾದ ಈ ಕರ್ನಾಟಕದ ನೆಲ ಜಲ ಐತಿಹಾಸಿಕಗಳ ದಾಖಲೆ ಈ ನಮ್ಮ ನಾಡಿಗೆ ಇದೆ ಭಾರತದಲ್ಲಿ ಎಂಟು ಜನ ಜ್ಞಾನಪೀಠ ಪ್ರಶಸ್ತಿಗೆ ಬಾಜನರಾದವರು ಕರ್ನಾಟಕ ರಾಜ್ಯ ಒಂದೇ ಕರ್ನಾಟಕದ ರಾಜಧಾನಿಯಾಗಬೇಕಾದ ಈ ದಾವಣಗೆರೆ ರಾಜಕೀಯ ಜಂಜಾಟದಲ್ಲಿ ಅವಕಾಶ ವಂಚಿತವಾಯಿತು ವಿಶ್ವವಿಖ್ಯಾತ ಬಸವ ಜಯಂತಿ ಪ್ರಾರಂಭವಾಗಿದ್ದೆ ಕರ್ನಾಟಕದ ದಾವಣಗೆರೆಯಲ್ಲಿ ಎಂದು
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಮ್ಮ ಅನುಭವ ಹಂಚಿಕೊಂಡರು. ದಾವಣಗೆರೆಯ ಪಿ.ಜೆ. ಬಡಾವಣೆಯ ಬಾಪೂಜಿ ವಿದ್ಯಾ ಸಂಸ್ಥೆಯ ಬಯಲು ರಂಗ ಮಂದಿರದಲ್ಲಿ ಎ.1 ರಂದು ನೇತಾಜಿ ಗ್ರೂಪ್, ಚೇತನ ಗೈಡ್ ಗ್ರೂಪ್ ವತಿಯಿಂದ ವಸಂತ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ ಕರ್ನಾಟಕದ ಕುರಿತು ಉಪನ್ಯಾಸ ನೀಡಿದರು ಜೊತೆಗೆ ಮಕ್ಕಳಿಗೆ ಆಟೊಟ ಸ್ಪರ್ಧೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಸೋಮೇಶ್ವರ ಎಸ್.ಶೆಟ್ಟರ್ ಸ್ವಾಗತಿಸಿದರು, ಮಕ್ಕಳ ಈ ವಸಂತ ಬೇಸಿಗೆ ಶಿಬಿರದ ಕುರಿತು ವಿಜಯ್ ಜೆ.ಎಸ್.
ಪ್ರಾಸ್ತಾವನೆಯಾಗಿ ಮಾತನಾಡಿದರು. ತೇಜಸ್ವಿನಿ ಸುರ್ವೆ ಶೆಣೈಯವರ ಕುರಿತು ಪರಿಚಯಿಸಿದರು, ದಿವ್ಯಶ್ರೀ ಎಸ್.ಶೆಟ್ಟರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ಕೊನೆಯಲ್ಲಿ ಸೌಮ್ಯ ಆನಂದ್ ವಂದಿಸಿದರು.

RELATED ARTICLES
- Advertisment -
Google search engine

Most Popular