Friday, January 17, 2025
Homeಮುಲ್ಕಿಮಕ್ಕಳು ಮೊಬೈಲ್ ಸಾಮಾಜಿಕ ಜಾಲ ತಾಣ ದಿಂದ ದೂರ ವಿದ್ದು ಶಿಕ್ಷಣಕ್ಕೆ ಮಹತ್ವ ನೀಡಬೇಕು -...

ಮಕ್ಕಳು ಮೊಬೈಲ್ ಸಾಮಾಜಿಕ ಜಾಲ ತಾಣ ದಿಂದ ದೂರ ವಿದ್ದು ಶಿಕ್ಷಣಕ್ಕೆ ಮಹತ್ವ ನೀಡಬೇಕು – ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ

ಮುಲ್ಕಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ 45ನೇ ವಾರ್ಷಿಕೋತ್ಸವ ಸಂಸ್ಥೆಯ ಸಬಾಂಗಣದಲ್ಲಿ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಶಿಕ್ಷಣವು ಜ್ಞಾನ ವೃದ್ದಿಗೆ ಪೂರಕವಾಗಿದ್ದು, ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಕೂಡ ಭಾಗಿಯಾಗಿ ಸಾಧಕರಾಗಿ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ ಮಕ್ಕಳು ಮೊಬೈಲ್ ಸಾಮಾಜಿಕ ಜಾಲತಾಣದಿಂದ ಆದಷ್ಟು ದೂರವಿದ್ದು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಲಿತಾ ಆರ್ ಸಾಲ್ಯಾನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ್ ಎಂ ಸಾಲ್ಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಮುಂಬೈ ಭಾರತ್ ಬ್ಯಾಂಕ್ ಚೇರ್ ಮ್ಯಾನ್ ಸೂರ್ಯಕಾಂತ್ ಜಯ ಸುವರ್ಣ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನದಾಸ ಹೆಜ್ಮಾಡಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು,ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಸಂಸ್ಥೆಯ ಆಡಳಿತಾಧಿಕಾರಿ ಮಂಜುಳಾ, ಟ್ರಸ್ಟಿ ಅವಿನಾಶ್ ಕೋಟ್ಯಾನ್,ಯೋಗೀಶ್ ಕೋಟ್ಯಾನ್, ಪ್ರಜ್ಞಾ ಕೋಟ್ಯಾನ್,ಸಂಸ್ಥೆಯ ಪ್ರಾಂಶುಪಾಲರಾದ ಯತೀಶ್ ಅಮೀನ್,ಮುಖ್ಯೋಪಾಧ್ಯಾಯಿನಿ ಗೀತಾ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಆರ್ಯನ್, ಯಶ್ ಎನ್ ಕೋಟ್ಯಾನ್,ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.


ಮಂಜುಳಾ ಕೆ ವಿ ಸ್ವಾಗತಿಸಿದರು ಸಹ ಶಿಕ್ಷಕರಾದ ಪುಷ್ಪರಾಜ್,ಪವಿತ್ರ ನಿರೂಪಿಸಿದರು
ಬಳಿಕ ಶೈಕ್ಷಣಿಕ, ಮತ್ತು ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ, ಸಾಧಕ ಶಿಕ್ಷಕರಿಗೆ ಗೌರವ, ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ,ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

RELATED ARTICLES
- Advertisment -
Google search engine

Most Popular